ಕ್ರಿಸ್‌ಮಸ್ ಆಚರಿಸಲು ಯುರೋಪಿಗೆ ಹೋಗ್ತಿದ್ದಾರಂತೆ ರಮ್ಯಾ

ಕೃಪೆ: ಉದಯ ಟಿವಿ
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಯುರೋಪಿಗೆ ಹೋಗಿ ತನ್ನ ಪ್ರಿಯಕರ ರಫೆಲ್ ಜತೆ ಕ್ರಿಸ್‌ಮಸ್ ಆಚರಿಸಲಿದ್ದಾರೆ. ಹಾಗಂತ ಸಾಮಾಜಿಕ ತಾಣದಲ್ಲಿ ಹೇಳಿಕೊಂಡಿದ್ದಾರೆ. ಹೋಗಿ ಬಂದು ಎಲ್ಲಾ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲಿದ್ದಾರಂತೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅವರ ಪ್ರಯಾಣ ಸುಖಕರವಾಗಲಿ ಎಂದು ಹಾರೈಸಿ. ಮತ್ತೊಂದು ವಿಷಯ ಪೋರ್ಚುಗಲ್‌ನಲ್ಲಿ ಮೀನು ಜನಪ್ರೀಯ ಆಹಾರ. ಅದರಲ್ಲೂ ಸಿಗಡಿ ಮೀನು ಅಲ್ಲಿನವರ ಅಚ್ಚುಮೆಚ್ಚಿನ ಆಹಾರ. ರಮ್ಯಾ ಇತ್ತೀಚೆಗೆ ಮೀನು ತಿನ್ನುವುದನ್ನು ಬಿಟ್ಟಿದ್ದೀನಿ ಅಂತ ಹೇಳಿಕೊಂಡಿದ್ದರು.

ಮೀನು ಸಾಯುವಾಗ ಒದ್ದಾಡಿ ಒದ್ದಾಡಿ ಸಾಯುತ್ತದಲ್ಲಾ ಅದನ್ನು ನೋಡಿ ಮನನೊಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂಬುದು ಅವರ ಸ್ಫಷ್ಟನೆ.

ಮತ್ತೆ, ಸಮುದ್ರದಲ್ಲಿ ವಿವಿಧ ಕಸರತ್ತು, ಗೂಳಿಕಾಳಗ, ಕಾಲ್ಚೆಂಡು, ಕುದುರೆ ಸವಾರಿ ಎಲ್ಲವನ್ನೂ ತುಂಬಾ ಇಷ್ಟಪಡುತ್ತಾರಂತೆ ಪೂರ್ಚುಗೀಸರು. ತುಂಬಾ ನಾಚಿಕೆ ಸ್ವಭಾವದ ರಮ್ಯನ ಭಾವಿ ಪತಿ ರಫೆಲ್‌ ಅದೆರಲ್ಲೆಲ್ಲಾ ಪಳಗಿರುತ್ತಾರೆ. ಯಾವುದಕ್ಕೂ ಅಲ್ಲಿನ ಅನುಭವನ್ನು ಹಂಚಿಕೊಳ್ಳುತ್ತಾರಾ ಕಾದುನೋಡುವ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು. ಆರೋಗ್ಯದಿಂದ ಹೋಗಿ ಆನಂದದಿಂದ ವಾಪಾಸು ಬರಲಿ ಅಲ್ವಾ...?

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ