ಕ್ವೀನ್ ಪಟ್ಟಕ್ಕೆ ನಯನತಾರಳಿಂದ ಪೈಪೋಟಿ !

ಶುಕ್ರವಾರ, 18 ಏಪ್ರಿಲ್ 2014 (10:49 IST)
PR
ಕ್ವೀನ್ ಪಟ್ಟದ ಕಡೆಗೆ ಹಾಟ್ ನಟಿ ನಯನತಾರ ಗಮನ ಕೊಟ್ಟಿದ್ದಾಳೆ. ಯಾಕೆ ಈಗ ಅಂತಹ ಯೋಜನೆ ಮತ್ತು ಯೋಚನೆ ಬಂತು ಈಕೆಗೆ ಅನ್ನುವ ಪ್ರಶ್ನೆ ಬರುವುದು ಸಹಜ. ಎಲ್ಲರಿಗು ಗೊತ್ತಿರುವಂತೆ ತನ್ನ ಮತ್ತು ಪ್ರಭುದೇವ ನಡುವಿನ ಪ್ರೆಅಮ ಮುರಿದು ಬಿದ್ದ ಬಳಿಕ ಆಕೆ ಎರಡನೇ ಇನ್ನಿಂಗ್ಸ್ ಆರಂಭಿಸಿದಳು. ಆರಂಭಂ , ರಾಜರಾಣಿ , ಕಾದಿರೆ ವೇಲನ್ ಕಾದಲ್ ಈ ಮೂರು ಚಿತ್ರಗಳ ಮೂಲಕ ಹ್ಯಾಟ್ರಿಕ್ ಗೆಲುವನ್ನು ಪಡೆದಳು ಈ ಚೆಲುವೆ.

ಸದ್ಯಕ್ಕೆ ಉದಯನಿಧಿ ಸ್ಟಾಲಿನ್ ಜೋಡಿಯಾಗಿ ನನ್ಭಂದ , ಶಿಂಬು ಜೊತೆಯಲ್ಲಿ ನಮ್ಮಾಳು ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ. ಟಾಲಿವುಡ್ ನಟ ಗೋಪಿ ಚಂದ್ ಅವರ ಜೊತೆ ದ್ವಿಭಾಷ ಚಿತ್ರದಲ್ಲೂ ಸಹ ಬ್ಯುಸಿ ಆಗಿದ್ದಾಳೆ ಈ ಚೆಲುವೆ. ಮತ್ತೊಂದು ಚಿತ್ರ ನೀ ಎಂಗೆ ಏನ್ ಅನ್ಭೆ ಅನ್ನುವ ಸಿನಿಮಾ ಸಹ ಸದ್ಯದಲ್ಲೇ ಆರಂಭ ಆಗಲಿದೆ.

ವೆಬ್ದುನಿಯಾವನ್ನು ಓದಿ