ಚಿತ್ರದ ಹೆಸರೇ 'ಇದು ಸಿನಿಮಾ ಅಲ್ಲ, ರಿಯಲ್ ಸ್ಟೋರಿ'

ಹೊಸ ವರ್ಷದ ಮೊದಲ ದಿನದಿಂದ 'ಇದು ಸಿನಿಮಾ ಅಲ್ಲ, ರಿಯಲ್ ಸ್ಟೋರಿ' ಎಂಬ ವಿಚಿತ್ರ ಹೆಸರಿಟ್ಟುಕೊಂಡ ಚಿತ್ರವೊಂದು ಚಿತ್ರೀಕರಣ ಆರಂಭಿಸಲಿದೆ.

ಎಂಥ ಮಾರಾಯ್ರೆ, ಚಿತ್ರದ ಹೆಸರು ತುಂಬಾ ಭಿನ್ನ ಉಂಟಲ್ಲ ಎಂದು ಪ್ರಶ್ನಿಸಿದರೆ, ನಿರ್ದೇಶಕ ರಾಜೀವ್ ಕೃಷ್ಣ ಹೇಳುವುದಿಷ್ಟು: `ಈ ಚಿತ್ರದಲ್ಲಿ ಕೇವಲ ಪ್ರೀತಿ ಅಥವಾ ಕ್ರೌರ್ಯ ತುಂಬಿಲ್ಲ. ಸಮಾಜದಲ್ಲಿ ಸಂಭವಿಸುವ ದಿನನಿತ್ಯದ ಘಟನೆಗಳನ್ನು ಆಧರಿಸಿ ಕತೆ ರಚಿಸಲಾಗಿದೆ' ಎನ್ನುತ್ತಾರೆ.

ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಕೋಲಾರದಲ್ಲಿ ಹಾಗೂ ಎರಡನೇ ಹಂತದ ಚಿತ್ರೀಕರಣ ದಾವಣಗೆರೆಯಲ್ಲಿ ನಡೆಯಲಿದೆಯಂತೆ. ನಾಯಕಿ-ನಾಯಕ ಪ್ರತ್ಯೇಕ ಪಾತ್ರಗಳಿಲ್ಲದೆ ಚಿತ್ರದಲ್ಲಿ ಏಳೆಂಟು ಮುಖ್ಯ ಪಾತ್ರಗಳನ್ನು ಮಾಡಿಸಲಾಗುವುದಂತೆ.

ಇಡೀ ಚಿತ್ರಕ್ಕೆ ಒಂದೇ ಹಾಡಿದ್ದು, ಅದನ್ನು ಶಮಿತಾ ಮಲ್ನಾಡ್ ಅವರು ಹಾಡಲಿದ್ದಾರಂತೆ. ಈ ಚಿತ್ರಕ್ಕೆ ಸಂಗೀತ ನೀಡುವವರು ಲಕ್ಷ್ಮೀನಾರಾಯಣ ಗೂಚಿ.

ವೆಬ್ದುನಿಯಾವನ್ನು ಓದಿ