ಛೆ ! ತರ್ಲೆನನ್ಮಕ್ಲಾ ... !

ಶನಿವಾರ, 2 ನವೆಂಬರ್ 2013 (13:16 IST)
PR
ಉಪೇಂದ್ರ ನಿರ್ದೇಶನದ 'ತರ್ಲೆನನ್ಮಗ' ಚಿತ್ರ 1992ರಲ್ಲಿ ಬಿಡುಗಡೆ ಆಗಿತ್ತು. ಜಗ್ಗೇಶ್ ಅಭಿನಯದ ಈ ಚಿತ್ರ ಸೂಪರ್ ಹಿಟ್ ಸಹ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಆ ಹೆಸರಲ್ಲಿ ಸ್ವಲ್ಪ ಮಾರ್ಪಾಟಾಗಿ 'ತರ್ಲೆ ನನ್ಮಕ್ಳು' ಹೆಸರಿನಲ್ಲಿ ಚಿತ್ರ ಸೆಟ್ಟೇರಿದೆ. ಆದರೆ ಈ ಚಿತ್ರ ಮುಖ್ಯ ಪಾತ್ರಧಾರಿ ಜಗ್ಗೇಶ್ ಅಲ್ಲ ಅವರ ಸುಪುತ್ರ ಯತಿರಾಜ. ಸಚ್ಚಿದಾನಂದ ಚಿತ್ರದ ನಿರ್ಮಾಪಕರು. ಶುಭಾ ಪೂಂಜಾ, ಅಂಜನಾ ದೇಶಪಾಂಡೆ ನಾಯಕಿಯರು. ಯುವ ನಿರ್ದೇಶಕ ರಾಕೇಶ್ ಇದನ್ನು ನಿರ್ದೇಶಿಸುತ್ತಿದ್ದಾರೆ.

'ಪ್ರೇಮ ಕಥೆಯ ಸಿನಿಮಾ ಮಾಡುವ ಯೋಚನೆಯಲ್ಲಿದ್ದಾಗ ರಾಕೇಶ್ ಈ ಕಥೆ ತಂದರು. ಚಿತ್ರಕಥೆ ತುಂಬಾ ಚೆನ್ನಾಗಿದೆ. 25 ಚಿತ್ರಗಳಲ್ಲಿ ನಾನು ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ, ಅಪ್ಪನೇ ನನಗಾಗಿ ಒಂದು ಪ್ರೇಮಕಥೆಯುಳ್ಳ ಸಿನಿಮಾ ನಿರ್ದೇಶಿಸಲು ತಯಾರಿ ನಡೆಸಿಕೊಳ್ಳುತ್ತಿದ್ದರು. ಆದರೆ, ರಾಕೇಶ್ ಹೇಳಿದ ಕಥೆಯನ್ನು ಮನೆಯಲ್ಲಿ ಎಲ್ಲರೂ ಒಪ್ಪಿದರು. ಸಂಪೂರ್ಣವಾಗಿ ಹಾಸ್ಯ ಚಿತ್ರ. ತುಂಬಾ ಚೆನ್ನಾಗಿದೆ' ಎನ್ನುವ ಮಾತು ಹೇಳಿದ್ದು ನಾಯಕ ಯತಿರಾಜ್.
ನಾಯಕ ಯತಿರಾಜ್ ಚಿತ್ರಕಥೆಯನ್ನು ಸುಲಭಕ್ಕೆ ಓಕೆ ಮಾಡಲಿಲ್ಲವಂತೆ. ಚಿತ್ರದ ಮತ್ತೊಬ್ಬ ನಾಯಕ ನಾಗಶೇಖರ್. ಇದೊಂದು ಪಕ್ಕ ಫ್ಯಾಮಿಲಿ ಬೇಸ್ಡ್ ಸಿನಿಮಾ ಅಂತಾರೆ ನಾಗಶೇಖರ್. ಚಿತ್ರದಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರನ್ನು ಕಿಚಾಯಿಸುವ ಹಾಡಿದೆಯಂತೆ . ನಿರ್ದೇಶಕ ಇದನ್ನು ಭಟ್ಟರ ಮೇಲಿನ ಪ್ರೀತಿಯಿಂದ ರಚಿಸಿದ್ದಾರಂತೆ. ಈ ಹಾಡಿನಿಂದ ಯಾರಿಗೂ ಹರ್ಟ್ ಆಗಲ್ಲವಂತೆ. ನಟಿ ಶುಭಾ ಪೂಂಜಾ ಗೆ ಚಿತ್ರದಲ್ಲಿ ಒಳ್ಳೆ ಪಾತ್ರ ಸಿಕ್ಕಿದೆಯಂತೆ. ಶುಭಾ ಇಲ್ಲಿ ಟೀ ಅಂಗಡಿ ಹುಡುಗಿ ಪಾತ್ರದಲ್ಲಿದಲ್ಲಿದ್ದಾರೆ. ಚಿತ್ರಕ್ಕೆ ಸೂರ್ಯವಂಶಿ ಸಂಗೀತ ನೀಡಿದ್ದಾರೆ. ಸೊ ಸದ್ಯದಲ್ಲೇ ನಗೋಕೆ ಸಿದ್ಧ ಆಗಿ !

ವೆಬ್ದುನಿಯಾವನ್ನು ಓದಿ