ಜಾಸ್ಮಿನ್.5 ಬರೀ ಕಥೆಯಲ್ಲ... ಸತ್ಯ ಘಟನೆಗಳ ನೈಜಚಿತ್ರಣ

ಮಂಗಳವಾರ, 17 ಡಿಸೆಂಬರ್ 2013 (11:01 IST)
* ಜಿ.ವಿ.ಜಯಶ್ರೀ
PR
ನಿನ್ನೆಗೆ ಒಂದು ವರ್ಷವಾಯಿತು ದೆಹಲಿ ಗ್ಯಾಂಗ್ ರೇಪ್ ನಡೆದು . ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದ ಘಟನೆ ನಡೆದು. ಭಾರತದಲ್ಲಿ ಹೆಣ್ಣುಮಕ್ಕಳಿಗೆ ತುಂಬಾ ಗೌರವ ಇದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಮ್ಮ ಸಮಾಜದಲ್ಲಿ ನಡೆದ ಘಟನೆ ಅದರಲ್ಲೂ ದೇಶದ ರಾಜಧಾನಿಯಲ್ಲಿ ನಡೆದ ಘಟನೆ ಅತ್ಯಂತ ಭೀಕರ ಮತ್ತು ಭೀಭತ್ಸ .

ಅಂತಹ ಕೃತ್ಯ ಮಾಡಿದ ಅಪರಾಧಿಗಳು ಈಗ ಜೈಲು ಸೇವೆಯಯನ್ನು ಪಡೆಯುತ್ತಿದ್ದಾರೆ. ಅಲ್ಲದೆ ಅವರಲ್ಲಿ ಒಬ್ಬ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆ ನಿಜ ಘಟನೆಯನ್ನು ಆಧರಿಸಿದ ಚಿತ್ರ ಈಗ ತೆರೆ ಏರಿದೆ. ಜಾಸ್ಮಿನ್.5 ಹೆಸರಿನ ಈ ಚಿತ್ರ ಈಗಾಗಲೇ ಬಹುತೇಕ ತನ್ನೆಲ್ಲ ಕೆಲಸವನ್ನು ಪೂರ್ಣ ಮಾಡಿದೆ. ಸಿನಿಮಾರಂಗದಲ್ಲಿ ಏನಾದರೂ ಸಾಧಿಸಬೇಕು ಎಂದು ಬಯಸಿದ ಒಂದಷ್ಟು ಆಸಕ್ತ ಮನಗಳು ತಯಾರಿಸಿದ ಚಿತ್ರ ಜಾಸ್ಮಿನ್.5 .ಈ ಚಿತ್ರಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಕೃಷ್ಣಾ ವಿ . ಮತ್ತು ಸಹಾಯಕ ನಿರ್ದೇಶಕ ರಮೇಶ್ ಸಿ. ಅವರೊಂದಿಗೆ ವೆಬ್ ದುನಿಯಾ ನಡಿಸಿದ ಮಾತು ಕಥೆಯು ಇಲ್ಲಿದೆ..

*ಈ ಚಿತ್ರಕ್ಕೆ ಜಾಸ್ಮಿನ್. 5ಅಂತ ಇದೆಯಲ್ಲ ಅದರರ್ಥ?
ಜಾಸ್ಮಿನ್ ಅಂದ್ರೆ ಮಲ್ಲಿಗೆ ಅನ್ನುವುದು ಎಲ್ಲರಿಗೂ ಗೊತ್ತು. ಈ ಚಿತ್ರದಲ್ಲಿ ಮಲ್ಲಿಗೆಯಂತಹ ಹುಡುಗಿ ಬಾಳು ಐದು ಜನ ಕಾಮಾಂಧರ ಕೈಲಿ ಸಿಕ್ಕು ನಲುಗುತ್ತದೆಯಲ್ಲ ಅದಕ್ಕಾಗಿ ಜಾಸ್ಮಿನ್ ಡಾಟ್ 5ಅಥವಾ ಜಾಸ್ಮಿನ್ ಫುಲ್ ಸ್ಟಾಪ್ 5ಎನ್ನುವ ಅರ್ಥ ಬರುವಂತೆ ಹೆಸರು ಇಡಲಾಗಿದೆ.

*ಇದು ಡೆಲ್ಲಿ ಗ್ಯಾಂಗ್ ರೇಪ್ ಕಥಾನಕವೇ?
-ಹವ್ದು ಇದರಲ್ಲಿ ಶೇ. 70 ರಷ್ಟು ನಾವು ದೆಹಲಿಯ ನೈಜ ಘಟನೆಯನ್ನು ಬಳಸಿಕೊಂಡಿದ್ದರೂ ಸೆ. 30 ರಷ್ಟು ಭಾಗವನ್ನುಕಮರ್ಷಿಯಲ್ ಪಾಯಿಂಟ್ ಗೆ ಆದ್ಯತೆ ನೀಡಿದ್ದೇವೆ.

*ನಿಮ್ಮ ಕಥೆಯಲ್ಲಿ ಏನು ವಿಶೇಷವಿದೆ?
ಸಾಕಷ್ಟಿದೆ. ಮುಖ್ಯವಾಗಿ ಮನುಷ್ಯರ ಕ್ರೌರ್ಯಕ್ಕೆ ಮನುಷ್ಯರಿಂದ ಶಿಕ್ಷೆ ದೊರಕದೆ ಹೋದರು ಸಹ ಅಂತಿಮ ವಾಗಿ ಅವರ ಒಳಗಿರುವ ಆತ್ಮಸಾಕ್ಷಿ ಅವರಿಗೆ ಶಿಕ್ಷೆ ನೀಡುತ್ತದೆ. ಅದನ್ನು ಹೇಳುವ ಉದ್ದೇಶ ನಮ್ಮದು.

* ಅಂದ್ರೆ ಮೆಸೇಜ್ ಇದೆ ಅಂದಗಾಯ್ತು ?
ಹೌದು . ಇದರಲ್ಲಿ ಮೆಸೇಜ್ ಇದೆ. ನಿಮಗೊಂದು ಘಟನೆ ಹೇಳ್ತೀನಿ ಈ ಕಥೆ ಸಿದ್ಧ ಮಾಡಿದ ಸ್ವಲ್ಪ ದಿನಗಳ ಬಳಿಕ ಈ ರೇಪ್ ಪ್ರಮುಖ ಅಪರಾಧಿ ರಾಮ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ. ನಿಜವೆಂದರೆ ನಾವು ಆ ಘಟನೆಯನ್ನು ಮೊದಲೇ ಬರೆದಿದ್ದೆವು. ಇದರ ಬಗ್ಗೆ ಹೀಗೂ ಉಂಟೆ ಕಾರ್ಯಕ್ರಮದಲ್ಲೂ ಪ್ರಸಾರ ಆಗಿತ್ತು.

*ಶೂಟಿಂಗ್ ಸಮಯದಲ್ಲಿ ಅನೇಕ ಅಗೋಚರ ಸಂಗತಿಗಳು ನಡೆಯಿತಂತೆ ?
ಖಂಡಿತಾ ಸತ್ಯ ನಮ್ಮ ಟೀಮ್ ಗೆ ಅನೇಕ ಬಗೆ ಅವ್ಯಕ್ತ ಅನುಭವಗಳು ಆಗಿವೆ. ಕೆಲವಕ್ಕೆ ಸಾಕ್ಷಿ ಇರಲ್ವಲ್ಲ . ಹೇಳೋಕೆ ಆಗಲ್ಲ.

* ಚಿತ್ರದ ನಾಯಕ ನಾಯಕರ ಬಗ್ಗೆ ಹೇಳಿ..
ಇಬ್ಬರೂ ಚಿತ್ರರಂಗಕ್ಕೆ ಹೊಸಬರು. ನವ್ಯ ನಾಯಕಿ. ಆಕೆಯ ತಾಯಿ ಸರೋಜಮ್ಮ ಕನ್ನಡ ಚಿತ್ರರಂಗದ ಹಿರಿಯ ನಟಿ.ಮೋಹನ್ ಚಿತ್ರದ ನಾಯಕ ಮತ್ತು ನಿರ್ಮಾಪಕ.

*ಉಳಿದ ಪಾತ್ರ ಪರಿಚಯ ..
ಭಾರತಿ ವಿಷ್ಣು ವರ್ಧನ್ (ಗೆಸ್ಟ್ ರೋಲ್ ) ಗಿರಿಜಾ ಲೋಕೇಶ್, ಸರೋಜಮ್ಮ, ಬಸಪ್ಪ ( ಲವ್ಲಿ ಸ್ಟಾರ್ ಪ್ರೇಂ ಅವರ ತಂದೆ),ಕುಳ್ಳ ಮಂಜ, ಭವ್ಯ, ಹೊನ್ನವಳ್ಳಿ ಕೃಷ್ಣ, ಅವಿನಾಶ್, ಹೇಮಂತ್, ಗೌತಂ ನಾಯ್ಡು , ರಮೇಶ್ ,ಬಾಬು, ಪ್ರಕಾಶ್ .

*ಉಳಿದ ಟೀಮ್ ಬಗ್ಗೆ ಹೇಳಿ..
ಕೊರಿಯಾಗ್ರಫಿ ಮನು ಹರಿ ಕೃಷ್ಣ, ಸಂಗೀತ ಸಂಜೀವ್ ಶ್ರೀ ಹರ್ಷ, ಎಡಿಟಿಂಗ್ ಶ್ರೀಕಾಂತ್

* ಚಿತ್ರದ ಬಿಡುಗಡೆ ಎಂದು ಫಿಕ್ಸ್ ಆಗಿದೆ?
ಜನವರಿ ಎಂಡ್ ಅಥವಾ ಫೆಬ್ರವರಿಯಲ್ಲಿ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದೇವೆ.
ಹೀಗೆ ತಮ್ಮ ಚಿತ್ರದ ಅನೇಕ ಸಂಗತಿಗಳನ್ನು ಮಾತನಾಡಿದರು. ಅತ್ಯಂತ ಮನಸ್ಪರ್ಶಿಯಾದ ಅದಕ್ಕಿಂತಲೂ ಖೇದಕರವಾದ ಸಂಗತಿಯನ್ನು ಪಿಕ್ಚರೈಸ್ ಮಾಡಿ ಸಮಾಜಕ್ಕೆ ಒಂದು ಸಂದೇಶ ಹೇಳಲು ಹೊರಟಿರುವ ಈ ಯುವ ಪ್ರತಿಭೆಗಳಿಗೆ ನಮ್ಮ ಕಡೆಯಿಂದ ಗುಡ್ ಲಕ್!

ವೆಬ್ದುನಿಯಾವನ್ನು ಓದಿ