ಜೆಕೆಯ ಜಸ್ಟ್ ಯಾರು ಗೊತ್ತೆ?

ಮಂಗಳವಾರ, 7 ಜನವರಿ 2014 (12:16 IST)
PR
ಕನ್ನಡ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಧಾರವಾಹಿ ಅಶ್ವಿನಿ ನಕ್ಷತ್ರ. ಇದರ ಮುಖ್ಯ ಪಾತ್ರಧಾರಿ ಜೆಕೆ ಅಲಿಯಾಸ್ ಜೆ ಕಾರ್ತಿಕ್. ಈ ನಟ ಹೀರೋ ಆಗಲು ಹೇಳಿ ಮಾಡಿಸಿದಂತಹ ನಟ. ಈಗಾಗಲೇ ಕನ್ನಡ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ನೆಗೆಟಿವ್ ರೋಲ್ ಗಳ ಮುಖಾಂತರ ತಮ್ಮನ್ನು ಗುರುತಿಸಿಕೊಂಡಿದ್ದ ಕಾರ್ತಿಕ್ ಟೀವಿ ಧಾರಾವಾಹಿಯ ಯಶಸ್ವಿ ಹೀರೋ..

ಅವರು ಪ್ರಸ್ತುತ ಶೋಭಾ ರಾಜಣ್ಣ ಅವರ ನಿರ್ಮಾಣದಲ್ಲಿ ತಯಾರಾಗುತ್ತಿರುವ ಜಸ್ಟ್ ಲವ್ ಚಿತ್ರದಲ್ಲಿ ಹೀರೋ ಆಗಿದ್ದಾರೆ. ಈ ಚಿತ್ರದ ನಿರ್ದೇಶನ ಮಾಡುತ್ತಿರುವವರು ಪ್ರಸಿದ್ಧ ಸಂಕಲಕಾರ- ನಿರ್ದೇಶಕ ನಾಗೇಂದ್ರ ಅರಸ್ . ನೇಹಾ ಸಕ್ಸೇನ, ಅಚ್ಯುತ್ ಕುಮಾರ್, ಸಂಗೀತ ಸೇರಿದಂತೆ ಹಲವಾರು ನಟರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ಈ ಚಿತ್ರವೂ ಶೇ. 6೦ ರಷ್ಟು ಚಿತ್ರೀಕರಣ ಪೂರೈಸಿದೆ. ಅರುಣ್ ಸುರೇಶ ಕ್ಯಾಮರ ಮತ್ತು ಸತೀಶ್ ಬಾಬು ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಇದೊಂದು ಫ್ಯಾಮಿಲಿ ಓರಿಯಂಟೆಡ್ ಸಿನಿಮಾವಂತೆ. ಅನಿರೀಕ್ಷಿತ ಕಾರಣಗಳಿಂದ ಈ ಚಿತ್ರಕ್ಕೆ ಜಸ್ಟ್ ಲವ್ ಅನ್ನುವ ಹೆಅರನ್ನು ಇದ ಬೇಕಾಯಿತು ಎಂದು ನಿರ್ದೇಶಕ ನಾಗೇಂದ್ರ ಅರಸ್ ಹೇಳಿದ್ದಾರೆ. ಒಟ್ಟಾರೆ ಟೀವಿಯಲ್ಲಿ ಗೆದ್ದಿರುವ ಜೆಕೆ ಹಿರಿತೆರೆಯಲ್ಲು ಗೆಲ್ಲಲಿ !

ವೆಬ್ದುನಿಯಾವನ್ನು ಓದಿ