ಟೀವಿ ಯಲ್ಲಿ ನಿಧಿ ಸುಬ್ಬಯ್ಯ ರೂಪ ರಾಶಿ ಇನ್ನುಮುಂದೆ.. ಯಾವ ಷೋ ಅಂದ್ರೆ !

ಸೋಮವಾರ, 14 ಏಪ್ರಿಲ್ 2014 (11:36 IST)
PR
ಪ್ರಸ್ತುತ ಮುಂಬೈ ನಲ್ಲಿ ನೆಲೆಸಿರುವ ಸ್ಯಾಂಡಲ್ ವುಡ್ ಚೆಲುವೆ ನಿಧಿ ಸುಬ್ಬಯ್ಯ. ತನ್ನ ರೂಪ ಪ್ರತಿಭೆ ಮಾದಕತೆ ಹೀಗೆ ಎಲ್ಲಾ ಸಂಗತಿಗಳಿಂದಲೂ ಮನಗೆದ್ದವಳು. ನಿಧಿ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವುದಲ್ಲದೆ ಬಾಲಿವುಡ್ ನಲ್ಲೂ ಸಹ ತನ್ನ ಪ್ರತಿಭೆ ತೋರಲು ಹೋದರು ಸಹಿತ ಪ್ರೇಕ್ಷಕರ ಕಣ್ಣಿಗೆ ಆಕೆಯ ಚಿತ್ರಗಳು ಕಾಣಲೇ ಇಲ್ಲ.

ಆದರೆ ಈಗ ಕಿರುತೆರೆಯಲ್ಲಿ ಕಾಣಲು ಸಿದ್ಧ ಆಗಿದ್ದಾಳೆ. ಆಕೆ ಫೇಸ್ ವಾಶ್ ಪೌಡರ್ ಮುಖಾಂತರ ಜನರ ಬಳಿ ಬರುತ್ತಿದ್ದಾಳೆ. ಆಕೆ ಸಲ್ಫೇಟ್ ರಹಿತ ಫೇಸ್ ವಾಶ್ ಪೌಡರ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.

ಸದ್ಯದಲ್ಲೇ ಆಕೆ ನಟಿಸಿರುವ ಈ ಜಾಹೀರಾತು ಕಿರುತೆರೆಯಲ್ಲಿ ರಾರಾಜಿಸಲಿದೆ. ಫೇರ್ ಅಂಡ್ ಲವ್ಲಿ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದ ನಿಧಿಯನ್ನು ಜಾಹೀರಾತು ವೀಕ್ಷಕರು ಪ್ರೀತಿಯಿಂದ ಸ್ವಾಗತಿಸಿದರು. ಈಗ ಆಕೆ ಫೇಸ್ ವಾಶ್ ಪೌಡರ್ ಮೂಲಕ ಎಲ್ಲರ ಗಮನ ಸೆಳೆಯಲು ಬರುತ್ತಿದ್ದಾಳೆ.. ಈ ಪುಡಿ ಆಕೆ ತಾರ ಬದುಕನ್ನು ಉಜ್ವಲ ಮಾಡುತ್ತಾ ?? ಸದ್ಯಕ್ಕೆ ನಮಗೆ ಗೊತ್ತಿರುವ ಉತ್ತರ ಎಂದರೆ ಗೊತ್ತಿಲ್ಲ !!

ವೆಬ್ದುನಿಯಾವನ್ನು ಓದಿ