ತರ್ಲೆ ನನ್ ಮಕ್ಳು ಚಿತ್ರಕ್ಕೆ ವಿಧ್ಯುಕ್ತ ಚಾಲನೆ

ಶುಕ್ರವಾರ, 23 ಆಗಸ್ಟ್ 2013 (10:07 IST)
PR
ತರ್ಲೆ ನನ್ ಮಗ...ಈ ಹೆಸರು ಕೇಳಿದಾಗಲೇ ಒಂದಷ್ಟು ಸಂಗತಿಗಳು ನಿಮ್ಮ ತಲೆಯೊಳಗೆ ಬಂದು ಹೋಗಿರಬೇಕಲ್ಲ, ಹೌದು, ಈ ಚಿತ್ರದ ಮೂಲಕ ಉಪೇಂದ್ರ ನಿರ್ದೇಶಕರಾದರು, ಜಗ್ಗೇಶ್ಗೆ ಇದೇ ಚಿತ್ರ ವೃತ್ತಿ ಬದುಕಿನಲ್ಲೊಂದು ತಿರುವು ನೀಡಿತು. ಈಗ ಅದೇ ಶೀರ್ಷಿಕೆಯನ್ನು ಕೊಂಚ ಬದಲಾಯಿಸಿ ತರ್ಲೆ ನನ್ ಮಕ್ಳು ಎಂದು ಹೆಸರು ನೀಡಿ ಚಿತ್ರ ತಯಾರಿಸಲಾಗುತ್ತಿದೆ. ಈ ಚಿತ್ರಕ್ಕಾಗಿ ಉಪೇಂದ್ರ ಹಾಗೂ ಜಗ್ಗೇಶ್ ಒಂದೊಂದು ಹಾಡು ಹಾಡಲಿದ್ದಾರೆ. ವಿ ನಾಗೇಂದ್ರ ಪ್ರಸಾದ್, ಮಳವಳ್ಳಿ ಸಾಯಿಕೃಷ್ಣ, ಎ ಪಿ ಅಜರ್ುನ್, ಸುನಿ ಹಾಗೂ ವಿ ಮನೋಹರ್ ರಚಿಸಿರುವ ಹಾಡನ್ನು ಉಪೇಂದ್ರ, ಜಗ್ಗೇಶ್, ನೆನಪಿರಲಿ ಪ್ರೇಮ್, ಶ್ರೀನಗರ ಕಿಟ್ಟಿ, ನಟ ನಿರ್ದೇಶಕ ಪ್ರೇಮ್ ಧ್ವನಿ ನೀಡಲಿದ್ದಾರೆ.

ಹಾಡಿನ ಸಂಯೋಜನೆ ಮುಹೂರ್ತ ಕಳೆದ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ದಿನದಂದು ನೆರವೇರಿತು. ವರಮಹಾಲಕ್ಷ್ಮಿ ಹಬ್ಬದ ದಿನದಂದು ನವರಸ ನಾಯಕ ಜಗ್ಗೇಶ್ ಅವರ ಪುತ್ರ ಯತಿರಾಜ್, ನಾಗಶೇಖರ್ ಹಾಗೂ ಹೊಸ ಹುಡುಗ ಪ್ರಜ್ವಲ್ ಅಭಿನಯದ ಚಿತ್ರಕ್ಕೆ ಸೈಕಲ್ ಗ್ಯಾಪ್ ಅಲ್ಲಿ ಆಟೋ, ಆಟೋ ಗ್ಯಾಪ್ ಅಲ್ಲಿ ಲಾರಿ, ಲಾರಿ ಗ್ಯಾಪ್ ಅಲ್ಲಿ ರೈಲು ಬಿಟ್ಟೆ ಎಂದು ಪ್ರಾರಂಭವಾಗುವ ಹಾಡನ್ನು ಹಾಡುವ ಮೂಲಕ ಚಿತ್ರಕ್ಕೆ ಚಾಲನೆ ಸಿಕ್ಕಿತು. ಸಂಯೋಜನೆ ಮುಹೂರ್ತ ಆಗಮಿಸಿದ್ದ ಉಪೇಂದ್ರ ತಾನು ಕಾಗೆಗೆ ಕರಡಿಗೆ ಫೇರ್ ಅಂಡ್ ಲವ್ಲಿ ಯಾಕ್ಲ... ಹಿಟ್ಟಿಲ್ಲ ಹೊಟ್ಟೆಗೆ ಲವ್ವು ಡವ್ವು ಬೇಕ್ಲಾ... ಹಾಡನ್ನು ಹೇಳುವುದಾಗಿ ತಿಳಿಸಿದರು. ಪ್ರೇಮ್ ಅವರ ಶಿಷ್ಯ ರಾಕೇಶ್ ಈ ಚಿತ್ರದ ಮೂಲಕ ಸ್ವತಂತ್ರ ನಿದರ್ೇಶಕರಾಗುತ್ತಿದ್ದಾರೆ. ನೈಜ ಕಥೆಯನ್ನು ಆಧಾರವಾಗಿಟ್ಟುಕೊಂಡಿರುವ ಈ ಚಿತ್ರಕ್ಕೆ ಮನರಂಜನೆಯೇ ಮೂಲಮಂತ್ರವಂತೆ.

ವೆಬ್ದುನಿಯಾವನ್ನು ಓದಿ