ದಕ್ಷಿಣ ಭಾರತದ ನಂಬರ್ ಒನ್ ನಟಿಯಾಗುವತ್ತ ರಾಗಿಣಿ ದ್ವಿವೇದಿ ?

ಬುಧವಾರ, 5 ಮಾರ್ಚ್ 2014 (10:25 IST)
PR
ದಕ್ಷಿಣ ಭಾರತದ ಅತ್ಯುತ್ತಮ ನಟಿಯರ ಸಾಲಿಗೆ ಸೇರಲು ರಾಗಿಣಿ ದ್ವಿವೇದಿ ಎಲ್ಲ ಬಗೆಯ ಕಸರತ್ತು ಮಾಡಲು ಆರಂಭಿಸಿದ್ದಾರೆ. ಗ್ಲಾಮರ್ ಮತ್ತು ಪ್ರತಿಭೆ ಎರಡರ ಸಮ್ಮಿಲನ ಹೊಂದಿರುವ ಈ ಚೆಲುವೆ ಈಗ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಎರಡು ಮಲೆಯಾಳಂ ಚಿತ್ರಗಳು ಸೇರಿದಂತೆ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ. ಆಕೆಯ ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳು ಶುಕ್ರವಾರ ಬಿಡುಗಡೆ ಆಗುತ್ತಿದೆ.

ನಿಮ್ರಿಂತು ನಿಲ್ ತಮಿಳು ಚಿತ್ರ ಮತ್ತು ಜಂಡಪೈ ಕಪಿರಾಜು ತೆಲುಗು ಚಿತ್ರವೂ ಈಗ ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಜಯರಾಂ ರವಿ ಮತ್ತು ನಾಣಿ ಅವರ ಜೊತೆ ನಟಿಸಿರುವ ಚಿತ್ರಗಳಾಗಿದೆ. ಇದು ಆಕೆಯ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನೆಲೆ ಊರಲು ಸಹಾಯ ಮಾಡುತ್ತದೆ ಎನ್ನುವುದು ಚಿತ್ರಪಂಡಿತರ ಲೆಕ್ಕಾಚಾರ ಆಗಿದೆ.

ವೆಬ್ದುನಿಯಾವನ್ನು ಓದಿ