ನಿಮ್ಮ ಗಂಡಂದಿರನ್ನು ನೀವೆ ಇಟ್ಟುಕೊಳ್ಳಿ ನನಗೆ ಬ್ಯಾಡ ಎಂದ ಸನ್ನಿಲಿಯೋನ್

ಶನಿವಾರ, 5 ಏಪ್ರಿಲ್ 2014 (16:00 IST)
ಈಗ ಎಲ್ಲರ ಗಮನ ಸನ್ನಿ ಲಿಯೋನ್ ನಟನೆಯ ಇಂದು ಬಿಡುಗಡೆ ಆಗುತ್ತಿರುವ ರಾಗಿಣಿ ಎಂ ಎಂ ಎಸ್ ಚಿತ್ರದತ್ತ .. ಈ ಚಿತ್ರದ ಪ್ರೋಮೊದಲ್ಲಿ ಸನ್ನಿ ಸೌಂದರ್ಯ ಕಂಡವರು ಆಕೆಯ ವಿಶ್ವರೂಪವನ್ನು ತೆರೆಯ ಮೇಲೆ ಕಾಣಲು ಕಾತರಿಸುತ್ತಿದ್ದ ದಿನ ಬಂದೆ ಬಿಟ್ಟಿದೆ.

ಅಮೇರಿಕಾದ ನೀಲಿ ಚಿತ್ರಗಳಲ್ಲಿ ನಟಿಸುವುದರ ಮುಖಾಂತರ ತನ್ನ ಬದುಕು ಆರಂಭಿಸಿದ್ದ ಈ ನೀಲಿರಾಣಿ ಸನ್ನಿ ಲಿಯೋನ್ ಭಾರತಕ್ಕೆ ಜಿಸ್ಮ್2 ಚಿತ್ರದಲ್ಲಿ ನಟಿಸಲೆಂದು ಬಂದವಳು ಆ ಬಳಿಕ ಇಲ್ಲಿಯೇ ನೆಲೆಯೂರಲು ಬೇಕಾದ ಅಂಶಗಳತ್ತ ಗಮನ ನೆಟ್ಟಳು. ಎಕ್ಸ್ ಪೋಜಿಂಗ್ ವಿಷಯದಲ್ಲಿ ಯಾವುದೇ ಬಗೆಯ ಸಂಕೋಚ ಹೊಂದದೆ ಆಕೆ ನಟಿಸಿದ ಚಿತ್ರಗಳಲ್ಲಿ ದೇಹದ ಸಿರಿ ಬಿಚ್ಚಿ ಬಿಚ್ಚಿ ತೋರುವ ಧೈರ್ಯ ಮಾಡಿದಳು. ಅದರಲ್ಲೂ ಹೊಸ ಚಿತ್ರ ರಾಗಿಣಿ...ಯಲ್ಲಿ ಆಕೆ ಮೈ ಮಾಟದ ಸವಿಯನ್ನು ಬಿಚ್ಚಿ ಬಿಸಾಡಿದ್ದಾಳೆ ಎಂದೇ ಹೇಳ ಬಹುದಾಗಿದೆ.

ಪೋರ್ನ್ ಸ್ಟಾರ್ ಅನ್ನುವ ಇಮೇಜನ್ನು ಹೊಂದಿದ್ದ ಸನ್ನಿ ಬಾಲಿವುಡ್ ಗೆ ಬಂದ ಬಳಿಕ ಮಾದಕ ತಾರೆ ಅನ್ನುವ ಖ್ಯಾತಿ ಪಡೆದಳು. ಇಂತಹ ಇಮೇಜ್ ನಿಂದ ದೂರ ಆಗುವ ಬಗ್ಗೆ ಯಾಕೆ ಪ್ರಯತ್ನ ಪಡ್ತಾ ಇಲ್ಲ ಎನ್ನುವ ಪ್ರಶ್ನೆಗೆ ಸನ್ನಿ ಹೇಳೋದಿಷ್ಟೇ, ನನಗೆ ಒಂದು ಬದುಕು ಕೊಟ್ಟ ಹಾಟ್ ಚಿತ್ರಗಳಲ್ಲಿ ನಟಿಸುವುದನ್ನು ನಾನು ಬಿಡಲಾರೆ.

ನನ್ನ ಬಗ್ಗೆ ಹೆಣ್ಣುಮಕ್ಕಳಿಗೆ ಆಸ್ಥೆ ಇಲ್ಲದೆ ಇರಬಹುದು, ಅವರ ಪತಿಯರು ನನ್ನ ಬಳಿ ಬಂದರೆ ಅನ್ನುವ ಆತಂಕ. ಆದರೆ ನನ್ನಪತಿ ಡೆನಿಯಲ್ ತುಂಬಾ ಹಾಟ್ ಮತ್ತು ಸೆಕ್ಸಿಯಾಗಿದ್ದಾರೆ. ಆತನನ್ನು ಬಿಟ್ಟು ಬೇರೆಯವರ ಬಗ್ಗೆ ನಾನ್ಯಾಕೆ ಚಿಂತೆ ಮಾಡಲಿ. ನಿಮ್ಮ ಗಂಡಂದಿರು ನನಗೆ ಬೇಡ.. ನಾನು ಒಳ್ಳೆಯ ವೈವಾಹಿಕ ಬದುಕನ್ನು ನಡೆಸುತ್ತಿದ್ದೇನೆ ಅಂತ ಎಲ್ಲ ಹೆಣ್ಣುಮಕ್ಕಳಿಗೂ ಹೇಳುವುದರ ಮುಖಾಂತರ ತನ್ನ ಅಸಮಾಧಾನವನ್ನು ಹೊರ ಹಾಕಿದ್ದಾಳೆ ಈ ಚೆಲುವೆ..!

ಮುಂದೆ ಆಕೆಗೆ ನಟಿಸುವ ಅವಕಾಶ ದೊರೆತರು ಸಹಿತ ತನ್ನನ್ನು ಬಿಚ್ಚು ಸುಂದರಿಯಾಗಿ ತೋರಿಸಿಕೊಳ್ಳುತ್ತಾಳಂತೆ. ಹೀಗೆ ಹೇಳುವುದರ ಮೂಲಕ ಸನ್ನಿ ತನ್ನ ದೇಹವನ್ನು ನಂಬಿ ಚಿತ್ರ ನೋಡಲು ಬರುವ ಪುರುಷ ವೀಕ್ಷಕರಿಗೆ ಸಮಾಧಾನ ನೀಡಿದ್ದಾಳೆ ಅಂಬೋದು ಬಾಲಿವುಡ್ ಕುಹುಕಿಗಳ ಮಾತು !

ವೆಬ್ದುನಿಯಾವನ್ನು ಓದಿ