ನಿರ್ದೇಶಕ ಎಸ್. ನಾರಾಯಣ್ ಇದೀಗ ಪ್ರಾಂಶುಪಾಲ!

ಸೋಮವಾರ, 29 ಜುಲೈ 2013 (10:23 IST)
PR
ಕನ್ನಡದ ಖ್ಯಾತ ನಿರ್ದೇಶಕ ಕಲಾ ಸಾಮ್ರಾಟ್ ಬಿರುದಾಂಕಿತ ಎಸ್. ನಾರಾಯಣ್ ಅವರಿಗೆ ಹೊಸ ಜವಾಬ್ದಾರಿಯೊಂದು ಹೆಗಲೇರಿದೆ. ಅವರೀಗ ನಿರ್ದೇಶಕ ಮಾತ್ರವಲ್ಲ, ಆದರ್ಶ ಫಿಲಂ ಮತ್ತು ಟಿವಿ ಇನ್ಸ್ಟಿಟ್ಯೂಟ್ನ ಪ್ರಾಂಶುಪಾಲರು.

ಹೌದು, ಈ ಹೊಸ ಜವಾಬ್ದಾರಿಯನ್ನು ಎಸ್ ನಾರಾಯಣ್ ಈಗ ಹೊತ್ತಿದ್ದಾರೆ. ಕಳೆದ 20 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದವರು ನಿರ್ಮಾಪಕ ಹಾಗೂ ನಿರ್ದೇಶಕರಾಗಿದ್ದ ದೊರೆ ಭಗವಾನ್. ಇದೀಗ ಅವರು ನಿವೃತ್ತರಾಗಿದ್ದು ನೂತನ ಪ್ರಾಂಶುಪಾಲರಾಗಿ ಎಸ್ ನಾರಾಯಣ್ ಪದಗ್ರಹಣ ಮಾಡಲಿದ್ದಾರೆ. ಹೊಸ ಪೀಳಿಗೆ ಕಂಡ ಅತ್ಯುತ್ತಮ ನಿರ್ದೇಶಕರಲ್ಲಿ ಎಸ್ ನಾರಾಯಣ್ ಕೂಡಾ ಒಬ್ಬರಾಗಿದ್ದು ಸದ್ಯದಲ್ಲೇ ಅವರು ಈ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಸರ್ಕಾರದಿಂದ ಅಂಗೀಕೃತವಾದ ಹಾಗೂ ಅನುದಾನಿತ ಸಂಸ್ಥೆಯಾಗಿದ್ದ ಚಿತ್ರದ ಪರಿಭಾಷೆಯನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ.

ಜಗ್ಗೇಶ್, ಡಿ.ರಾಜೇಂದ್ರ ಬಾಬು, ಗಣೇಶ್, ಪ್ರಿಯಾ ಹಾಸನ್ ಮೊದಲಾದ ಪ್ರಸಿದ್ಧ ನಟರು ಇಲ್ಲಿ ತರಬೇತಿ ಪಡೆದೇ ಚಿತ್ರರಂಗಕ್ಕೆ ಬಂದವರು. ಪ್ರಾಂಶುಪಾಲ ಹುದ್ದೆಯೊಂದಿಗೆ ನಾರಾಯಣ್ ಉಪೇಂದ್ರ ಜೊತೆ ಒಂದು ಹೊಸ ಚಿತ್ರ ಮಾಡಲು ತಯಾರಿ ನಡೆಸಿದ್ದಾರೆ. ಚಿತ್ರಕ್ಕೆ ಬೃಹಸ್ಪತಿ ಎಂದು ಹೆಸರಿಡಲಾಗಿದ್ದು ಚಿತ್ರ ಪ್ರಯೋಗಾತ್ಮಕವಾಗಿರಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಹೊಸ ಹುದ್ದೆ ಹೊರಲಿರುವ ನಿದರ್ೇಶಕ ಎಸ್ ನಾರಾಯಣ್ ಅವರಿಗೆ ಗುಡ್ಲಕ್.

ವೆಬ್ದುನಿಯಾವನ್ನು ಓದಿ