ನೆಲಮಂಗಲದಲ್ಲಿ ಚಿತ್ರೀಕರಣಗೊಂಡ ಪೋರನ ಕ್ಲೈಮ್ಯಾಕ್ಸ್

ಮಂಗಳವಾರ, 6 ಆಗಸ್ಟ್ 2013 (10:50 IST)
PR
ಪೋರ ಹೆಸರಿನ ಕನ್ನಡ ಚಿತ್ರವೊಂದು ಸೆಟ್ಟೇರಿದೆ. ಆದರೆ ಈ ಪೋರ ಕೇವಲ ತಂಟೆ ತರಲೆಯ ಹುಡುಗನಲ್ಲ. ಅದರೊಂದಿಗೆ ಪತ್ರಿಕೋದ್ಯಮವನ್ನೇ ವೃತ್ತಿಯಾಗಿಸಿಕೊಂಡು ಅಮೆರಿಕಾಗೆ ಹೋಗಿ ತನಿಖಾ ವರದಿಯೊಂದನ್ನು ಸಿದ್ಧಪಡಿಸುತ್ತಾನೆ. ಹೌದು ಈ ಚಿತ್ರ ಹುಡುಗಾಟದ ಚೌಕಟ್ಟು ದಾಟಿ ಆಕ್ಷನ್ ಪ್ರಧಾನ ಚಿತ್ರವಾಗಿ ಕಾಣಿಸಿಕೊಳ್ಳಲಿದೆ.

ಈ ಹಿಂದೆ ಬಾಯ್ಫ್ರೆಂಡ್ ಹಾಗೂ ಅಂಜದಿರು ಚಿತ್ರ ನಿದರ್ೇಶಿಸಿದ್ದ ಜನಾರ್ದನ್ ಚಿತ್ರದ ನಾಯಕ ಪೋರನಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಕಥೆ ಚಿತ್ರಕಥೆಯೂ ಅವರದ್ದೇ. ಈ ಚಿತ್ರದಲ್ಲಿ ತನ್ನ ಹೆಸರನ್ನು ಅಮೋಘ ಎಂದು ಬದಲಾಯಿಸಿಕೊಂಡಿದ್ದಾರೆ. ಅಮೆರಿಕಾ ಮೂಲದ ವ್ಯಾಲರಿ ಎಂಬ ನಟಿ ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ವುಡ್ ಪ್ರವೇಶಿಸುತ್ತಿರುವ ಬಗ್ಗೆ ಈಗಾಗಲೇ ಓದಿದ್ದೀರಿ. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ನೆಲಮಂಗಲದ ಶ್ರೀನಿವಾಸ ಕಲ್ಯಾಣಮಂಟಪದಲ್ಲಿ ನಡೆಯಿತು. ವಧುವಿನ ಅಲಂಕಾರದಲ್ಲಿ ವ್ಯಾಲರಿ ಅಲ್ಲಿಗೆ ಬಂದ ನಾಯಕನಿಗೆ ಆತ ಮಾಡಿದ ತಪ್ಪೆಲ್ಲಾ ಹೇಳೆ ಛೀಮಾರಿ ಹಾಕುವ ದೃಶ್ಯದ ಶೂಟಿಂಗ್ ಅಲ್ಲಿ ನಡೆಯಿತು. ಗಿರೀಶ್ ಕಾರ್ನಾಡ್ ಚಿತ್ರದಲ್ಲಿ ಗೃಹಮಂತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಲು ಜಾರಿ ಏಟು ಮಾಡಿಕೊಂಡ ಪರಿಣಾಮ ಅವರು ಪತ್ರಿಕಾಗೋಷ್ಠಿಗೆ ಬಂದಿರಲಿಲ್ಲ.

ಚಿತ್ರ ಅಮೆರಿಕಾದ ನ್ಯೂಯಾರ್ಕ್ , ವಾಷಿಂಗ್ಟನ್ ಮೊದಲಾದೆಡೆ 20ದಿನಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದಿದೆ. ಇನ್ನು ಒಂದು ಹಾಡು ಹಾಗೂ ಸಾಹಸ ದೃಶ್ಯದ ಚಿತ್ರೀಕರಣ ಮುಗಿದರೆ ಚಿತ್ರ ಮುಗಿದಂತೆಯೇ ಎಂದರು ನಿರ್ದೇಶಕ ಅಮೋಘ. ಲಕ್ಕಿ ಶಂಕರ, ಮನದೀಪ್ ರಾಯ್, ತಬಲಾನಾಣಿ, ಭವ್ಯಾ, ಲಕ್ಷ್ಮಣ್ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ