ಅಂತಹ ಅಮೋಘ ಅವಕಾಶವೊಂದು ಅವರನ್ನು ಹುಡುಕಿಕೊಂಡು ಬಂದಿದೆ. ದಕ್ಷಿಣ ಭಾರತದ ಜನಪ್ರಿಯ ಆಕ್ಷನ್ ಡೈರೆಕ್ಟರ್ ಜಾಲಿ ಬಾಸ್ಟಿನ್ ಈ ಚಿತ್ರದ ನಿರ್ದೇಶಕರು. ಗಂಡುಗಲಿ ಕೆ. ಮಂಜು ನಿರ್ಮಿಸುತ್ತಿರುವ ಚಿತ್ರದಲ್ಲಿ ರಾಗಿಣಿ ಅಪರೂಪದ ಪಾತ್ರದಲ್ಲಿ ನಟಿಸಲಿರುವುದನ್ನು ಚಿತ್ರತಂಡ ಖಚಿತಪಡಿಸಿದೆ.
ರಾಗಿಣಿ ಹಲವು ಚಿತ್ರಗಳಲ್ಲಿ ಇದುವರೆಗೆ ನಟಿಸಿದ್ದರೂ, ಆಕ್ಷನ್ ಪಾತ್ರ ಅವರಿಗೆ ಒಲಿದಿರಲಿಲ್ಲ. ಇನ್ನಷ್ಟೇ ಹೆಸರಿಡಬೇಕಾಗಿರುವ ಈ ಸಿನಿಮಾದಲ್ಲಿ ಸಾಕಷ್ಟು ಸ್ಟಂಟ್ಗಳನ್ನು ಅವರು ಮಾಡಲಿದ್ದಾರೆ. ಅದಕ್ಕಾಗಿ ಬಾಸ್ಟಿನ್ ತರಬೇತಿಯನ್ನು ಕೂಡ ನೀಡುತ್ತಿದ್ದಾರೆ. ಬುಲ್ಲೆಟ್ ರೈಡಿಂಗ್ ಮಾಡುವಷ್ಟು ಪಾತ್ರ ತೀವ್ರತೆಯನ್ನು ಹೊಂದಿರುತ್ತದೆ. ಆಕೆ ಕನ್ನಡ ಚಿತ್ರರಂಗದ ಆಕರ್ಷಕ ನಟಿ ಮತ್ತು ಎತ್ತರವಾಗಿರುವುದರಿಂದ ಆಯ್ಕೆ ಮಾಡಿದ್ದೇನೆ ಅಂತ ಬಾಸ್ಟಿನ್ ಹೇಳಿಕೊಂಡಿದ್ದಾರೆ.
ಅಂದ ಹಾಗೆ, ಬಾಸ್ಟಿನ್ ಕನ್ನಡದಲ್ಲಿ ಈ ಹಿಂದೆಯೂ ಕೆಲಸ ಮಾಡಿದವರು. ಪೂಜಾ ಗಾಂಧಿ ನಾಯಕಿಯಾಗಿದ್ದ 'ಕಾದಿರುವೆ ನಿನಗಾಗಿ' ಚಿತ್ರದಲ್ಲಿ ಅವರು ನಿರ್ದೇಶಕರಾಗಿದ್ದರು. ನಿರೀಕ್ಷೆ ಮುಟ್ಟಿರದ ಆ ಚಿತ್ರ ಬಾಕ್ಸಾಫೀಸಿನಲ್ಲಿ ಮುಗ್ಗರಿಸಿತ್ತು. ಎರಡನೇ ಚಿತ್ರ ಹಾಗಾಗಬಾರದೆಂದು ಸಾಕಷ್ಟು ಪೂರ್ವ ತಯಾರಿಗಳನ್ನು ನಡೆಸಿದ್ದಾರಂತೆ.
ರಾಗಿಣಿಗೆ ಈ ಚಿತ್ರದ ಮೂಲಕ ಹೊಸ ಇಮೇಜ್ ತಂದು ಕೊಡುವ ಭರವಸೆಯಲ್ಲಿರುವ ಬಾಸ್ಟಿನ್, ಈಗಷ್ಟೇ ನಾಗ ಚೈತನ್ಯ ನಾಯಕರಾಗಿರುವ ತೆಲುಗು ಚಿತ್ರವೊಂದನ್ನು ಮುಗಿಸಿ ಕೈ ತೊಳೆದುಕೊಂಡು ಬೆಂಗಳೂರಿನತ್ತ ಬಂದಿದ್ದಾರೆ.