ಪೈಪೋಟಿಯ ನಡುವೆಯೂ ಬೆಳೆಯುತ್ತಿರುವ ಸ್ಟಾರ್ ಕ್ರಿಯೇಟರ್ಸ್

MOKSHA
ಕರ್ನಾಟಕದ ಮುಂಚೂಣಿಯ ಪ್ರಮುಖ ಚಲನಚಿತ್ರ ಅಭಿನಯ ಕಲಿಕಾ ಸಂಸ್ಥೆ ಎಂಬ ಕೀರ್ತಿಯನ್ನು ಪಡೆದಿರುವ ಸ್ಟಾರ್ ಕ್ರಿಯೇಟರ್ಸ್, ಹೊಸ ಹೊಸ ಪೈಪೋಟಿಯ ನಡುವೆಯೂ ತನ್ನ ಯಶೋಗಾಥೆಯನ್ನು ಮುಂದುವರಿಸಿಕೊಂಡೇ ಬರುತ್ತಿರುವುದು ಅಚ್ಚರಿಯ ಮತ್ತು ಸಂತೋಷದ ವಿಷಯ.

ಅಭಿನಯ, ನೃತ್ಯ, ಫೈಟುಗಳು, ಮೆಕೋನೋರ್, ಕಥೆ- ಚಿತ್ರಕಥೆ- ಸಂಭಾಷಣೆ ರಚನೆ, ಕಿರುಚಿತ್ರ ನಿರ್ದೇಶನ, ಸಂಕಲನ ಇವೇ ಮೊದಲಾದ ಕ್ಷೇತ್ರಗಳಲ್ಲಿ ತರಬೇತಿ ನೀಡುತ್ತಿರುವ ಈ ಸಂಸ್ಥೆ ತರಬೇತಿ ಪಡೆದ ವಿದ್ಯಾರ್ಥಿಗಳನ್ನು ಸಿನಿಮಾರಂಗ ಹಾಗೂ ಟಿವಿ ಮಾಧ್ಯಮಕ್ಕೆ ಪರಿಚಯಿಸಿ, ಚಿಗುರು ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಬಂದಿದೆ ಎಂಬುದು ಮೆಚ್ಚುಗೆಯ ಅಂಶ.

ಅಭಿನಯ ಸಂಬಂಧಿ ವಿಭಾಗಗಳಲ್ಲಿನ ತರಬೇತಿಯ ಜೊತೆಗೇ ಕಾರ್ಯಕ್ರಮ ನಿರೂಪಣೆ ಹಾಗೂ ವಾರ್ತಾವಾಚನ ವಿಭಾಗದಲ್ಲೂ ತರಬೇತಿ ನೀಡುತ್ತಿರುವುದು ಈ ಸಂಸ್ಥೆಯ ವಿಶಿಷ್ಟ ಅಂಶ. ಇದೊಂದು ಅಂಶವೇ ಅದನ್ನು ಇನ್ನಿತರ ತರಬೇತಿ ಸಂಸ್ಥೆಗಳಿಗಿಂತ ವಿಭಿನ್ನವಾಗಿಸಿದೆ ಎನ್ನಬಹುದು. ಸಂಕಲನದ ತರಬೇತಿಯನ್ನು ಎಸ್ಸಿಪಿ ಮತ್ತು ಅವಿಡ್ ಸಾಫ್ಟ್‌ವೇರ್ ಬಳಸಿ ನೀಡುವುದರಿಂದ ಕಾಲಕ್ಕೆ ತಕ್ಕಂತೆ ಸಂಸ್ಥೆಯೂ ತಾಂತ್ರಿಕವಾಗಿ ಬೆಳೆದಿದೆ ಎನ್ನಬಹುದು.

ಅಶ್ವಿನಿ, ಮೋಹನ್, ಶ್ರೀಲಕ್ಷ್ಮಿ, ಸ್ವಾತಿ, ರೋಷನಿ, ತನುಷಿಕಾ ಹೀಗೆ 21ಕ್ಕೂ ಮೀರಿದ ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಹಾಗೂ ಟಿವಿ ಮಾಧ್ಯಮಕ್ಕೆ ನೀಡಿರುವ ಕೀರ್ತಿ ಸ್ಟಾರ್ ಕ್ರಿಯೇಟರ್ಸ್ ಸಂಸ್ಥೆಯದ್ದು. ಈ ಸಂಸ್ಥೆ ತನ್ನ ಹೆಸರಿಗೆ ತಕ್ಕಂತೆಯೇ ಸ್ಟಾರ್ ಆಗಲಿ ಎಂದೇ ಹಾರೈಸೋಣ.

ವೆಬ್ದುನಿಯಾವನ್ನು ಓದಿ