ಪ್ರಕಾಶ್ ರಾಜ್ ನಿರ್ದೇಶನದ ಒಗ್ಗರಣೆ ನಾಯಕಿನಟಿ ಸ್ನೇಹ ಗರ್ಭಿಣಿ ?

ಬುಧವಾರ, 15 ಏಪ್ರಿಲ್ 2015 (10:46 IST)
ತಮಿಳು ನಟಿ ಸ್ನೇಹ. ಆಕೆ ತಮಿಳು ಮಾತ್ರವಲ್ಲ ತೆಲುಗು ಚಿತ್ರರಂಗದಲ್ಲೂ ಸಹಿತ ಅಧಿಕ ಚಿತ್ರಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಾಕೆ. ಸ್ನೇಹ ಇತ್ತೀಚಿಗೆ ಪ್ರಕಾಶ್ ರಾಜ್ ಅವರ ನಟನೆ ಹಾಗೂ ನಿರ್ದೇಶನದ ಚಿತ್ರ ಒಗ್ಗರಣೆಯಲ್ಲಿ ನಟಿಸಿದ್ದರು. 

ಆ ಚಿತ್ರ ಕನ್ನಡ -ತಮಿಳು- ತೆಲುಗು ಭಾಷೆಯಲ್ಲಿ ನಿರ್ಮಾಣವಾಗಿತ್ತು. ಮಲೆಯಾಳಂ ಮೂಲದ ಆ ಚಿತ್ರವು ಕನ್ನಡದಲ್ಲಿ ಹೆಚ್ಚು ಯಶಸ್ವಿ ಆಗಿತ್ತು. ಈಗ ಆ ವಿಷಯ ಯಾಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡ ಬಹುದು. ಅದಕ್ಕೆ ಉತ್ತರ ಇಲ್ಲಿದೆ. ಆಕೆ ಈಗ  ಗರ್ಭಿಣಿ ಎಂದು ತನ್ನ ಟ್ವಿಟ್ಟರ್ ಪೇಜ್‌ನಲ್ಲಿ ತಿಳಿದು ಬಂದಿದೆ. ಆಕೆಗೆ ಅಭಿಮಾನಿಗಳಿಂದ ರಾಶಿ ರಾಶಿ ಶುಭಾಶಯ ಸಂದೇಶಗಳು ಹರಿದು ಬರುತ್ತಿವೆ. 
 
ಆಕೆಯ ಪತಿ ನಟ ಪ್ರಸನ್ನ ಅವರು ಈ ಸುದ್ದಿಯನ್ನು ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ತಿಳಿಸಿದ್ದಾರೆ.  ಈ ಶುಭ ಸುದ್ದಿ ಕೇಳಿ ನನಗೆ ತುಂಬಾ ಖುಷಿಯಾಗಿದೆ . ನಮ್ಮ ಮನೆಯ ಹೊಸ ಸದಸ್ಯನ ಬರುವಿಕೆಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ. ಆ ದಂಪತಿಗಳಿಗೆ ಸಿಕ್ಕಾಪಟ್ಟೆ ಶುಭಾಶಯಗಳು ಹರಿದು ಬರುತ್ತಿದೆ. ವೆಬ್ ದುನಿಯಾ ಪತ್ರಿಕೆಯ ಕಡೆಯಿಂದ ಶುಭ ಹಾರೈಕೆಗಳು. 

ವೆಬ್ದುನಿಯಾವನ್ನು ಓದಿ