ಬಣ್ಣದಲ್ಲಿ ಕಸ್ತೂರಿ ನಿವಾಸ ...ತೆರೆಗೆ ಸದ್ಯದಲ್ಲೇ !

ಶನಿವಾರ, 5 ಏಪ್ರಿಲ್ 2014 (09:36 IST)
PR
ಕಸ್ತೂರಿ ನಿವಾಸ ಅತಿ ಶ್ರೇಷ್ಠ ಕನ್ನಡ ಚಿತ್ರಗಳಲ್ಲಿ ಒಂದಾಗಿದೆ. 1971 ರಲ್ಲಿ ಬಿಡುಗಡೆ ಆದ ಕಪ್ಪು ಬಿಳುಪು ಚಿತ್ರ ಆರಂಭದಲ್ಲಿ ಇದನ್ನು ಬಣ್ಣದಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಲಾಗಿತ್ತು . ಆದರೆ ಅನಗತ್ಯ ಖರ್ಚು ಮಾಡದಿರಿ ಎಂದು ಡಾ. ರಾಜ್ ಅವರು ಹೇಳಿದ್ದರಂತೆ.

ಆದ ಕಾರಣ ಆ ಯೋಜನೆಯನ್ನು ಕೈ ಬಿಡಲಾಗಿತ್ತಂತೆ. ಈ ಚಿತ್ರವನ್ನು ಕೆಸಿಎನ್ ಗೌಡ ನಿರ್ಮಿಸಿದ್ದರು. ನಲವತ್ತು ಮೂರು ವರ್ಷಗಳ ನಂತರ , ನಿರ್ಮಾಪಕ ಕೆಸಿಎನ್ ಗೌಡರ ಕನಸಿನ ಅಂತಿಮವಾಗಿ ಕೈಗೂಡಲಿಡೇ. ಗೌಡರು ಈ ಚಿತ್ರಕ್ಕೆ ಬಣ್ಣ ಹಚ್ಚುವ ಕೆಲಸ ಅರ್ಧ ಇರುವಾಗಲೇ ನಿಧನರಾದರು.

PR
ಈಗ ಅದರ ಹೊಣೆಯನ್ನು ಅವರ ಮಕ್ಕಳು ವಹಿಸಿಕೊಂಡಿದ್ದಾರೆ. ಈ ಚಿತ್ರ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಚಿತ್ರದ ನಿರ್ದೇಶಕ ದೊರೈ ಭಗವಾನ್. 3.75 ಲಕ್ಷ ರೂಗಳಲ್ಲಿ ಬಿಡುಗಡೆ ಆಗಿದ್ದ ಚಿತ್ರಕ್ಕೆ ಬಣ್ಣ ಬಳಿಯಲು ಈಗ ಮ 2 ಕೋಟಿ ವೆಚ್ಚವಾಗಿದೆ.

ವೆಬ್ದುನಿಯಾವನ್ನು ಓದಿ