ಬಾಲಿವುಡ್ ಹೀರೋಗಳ ಡ್ರೆಸ್ ಸೂಪರ್ ಉಪ್ಪಿ ಮೈಮೇಲೆ!

ಶನಿವಾರ, 30 ನವೆಂಬರ್ 2013 (10:31 IST)
PR
ಉಪೇಂದ್ರ ನಟಿಸಿದ ಚಿತ್ರಗಳಲ್ಲಿ ವಿಶೇಷ ಇಲ್ಲವೇ ವಿವಾದ ಇರಲೇ ಬೇಕು. ಹೆಚ್ಚು ಕಾಂಟ್ರವರ್ಸಿ ಅಲ್ಲದೇ ಇದ್ದರೂ ತಮ್ಮ ವಿಶೇಷವಾದ ಮೈಂಡ್ ನಿಂದ ಉಪ್ಪಿ ಸ್ಯಾಂಡಲ್ ವುಡ್ ನಲ್ಲಿಯೇ ಭಿನ್ನ ಸ್ಥಾನ ಪಡೆದಿದ್ದಾರೆ. ಅವರ ಹೊಸ ಚಿತ್ರ ಬ್ರಹ್ಮ ಸಹ ಈಗ ವಿಶೇಷ ಅಂಶಗಳನ್ನು ಒಳಗೊಂಡಿದೆ. ಉಪ್ಪಿ ಜೊತೆಯಾಗಿರುವ ಚೆಲುವೆ ಪ್ರಣೀತಾ.ಉಪ್ಪಿ ವೀರ ಯೋಧನಂತೆ ಅಲಂಕರಿಸಿ ಕೊಂಡಿರುವ ಪೋಸ್ಟರ್ ಗಳು ಎಲ್ಲೆಡೆ ರಾರಾಜಿಸಿತ್ತು.

ಈಗ ಲೆಡ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ . ಸಾಮಾನ್ಯವಾಗಿ ಬಾಲಿವುಡ್ ಹೀರೋಗಳು ಮಾತ್ರ ಧರಿಸುವ ಇಂತಹ ಉಡುಗೆ ತೊಟ್ಟು ಉಪ್ಪಿ ಬ್ರಹ್ಮ ಚಿತ್ರದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಇದರ ಕೊರಿಯಾಗ್ರಫಿ ಮಾಡಿರುವುದು ಪ್ರಖ್ಯಾತ ಕೊರಿಯಾಗ್ರಾಫರ್ ಚಿನ್ನಿ ಪ್ರಕಾಶ್. ಚಿತ್ರಕ್ಕೆ ಶೀರ್ಷಿಕೆ ಗೀತೆ ಬರೆದವರು ಹೃದಯ ಶಿವ.

ಬಾಲಿವುಡ್ ನ ಕೆಲವು ನಾಯಕರು ಮಾತ್ರ ಧರಿಸುವ ಇಂತಹ ಸೂಟ್ ನ ಧರಿಸುವ ಮೂಲಕ ಉಪ್ಪಿ ಸ್ಯಾಂಡಲ್ ವುಡ್ ನಲ್ಲಿ ಹೊಸ ಬರಹ ಬರೆಯುತ್ತಿದ್ದಾರೆ ಬ್ರಹ್ಮನ ಮೂಲಕ.. ಅದಕ್ಕೆ ಅವರು ಸೂಪರು ಉಪ್ಪಿ!

ವೆಬ್ದುನಿಯಾವನ್ನು ಓದಿ