ಬಿಗ್ಬಾಸ್ ಬಳಿಕ ಇದೀಗ ಈಟಿವಿಯಲ್ಲಿ ಇಂಡಿಯನ್

ಬುಧವಾರ, 24 ಜುಲೈ 2013 (15:18 IST)
PTI
ಈಟಿವಿಯ ಪ್ರೈಮ್ ಟೈಮ್ನಲ್ಲಿ ಪ್ರಸಾರವಾಗುತ್ತಿದ್ದ ಬಿಗ್ಬಾಸ್ ಮುಗಿದ ಬಳಿಕ ಆ ಸಮಯಕ್ಕೆ ಸೂಕ್ತವಾದ ಕಾರ್ಯಕ್ರಮ ಯಾವುದಿರಬಹುದು ಎಂಬು ಕುತೂಹಲ ಪ್ರೇಕ್ಷಕರಿಗಿತ್ತು. ಈಗ ಅದಕ್ಕೆ ತೆರೆಬಿದ್ದಿದ್ದು ಈಟಿವಿ ಮತ್ತೊಂದು ರಿಯಾಲಿಟಿ ಶೋ ನೀಡಲು ಸಿದ್ಧತೆ ನಡೆಸುತ್ತಿದೆ.

ಬಿಗ್ಬಾಸ್ ಪ್ರಸಾರವಾಗುತ್ತಿದ್ದಾಗ ಅದರ ಟಿಆರ್ಪಿ ರೇಟಿಂಗ್ ಹೊಸ ಇತಿಹಾಸ ಬರೆದಿದ್ದು ನಿಮಗೆಲ್ಲಾ ಗೊತ್ತೇ ಇದೆ. ಕನ್ನಡದ ಕೋಟ್ಯಾಧಿಪತಿಯ ವೀಕ್ಷಕರನ್ನೂ ಮೀರಿ ಬಿಗ್ಬಾಸ್ ಬೆಳೆದಿತ್ತು. ಈಗ ಮತ್ತೊಂದು ಟಿಆರ್ಪಿ ಸಮರಕ್ಕೆ ವೇದಿಕೆ ಸಿದ್ದವಾಗಿದೆ. ಈ ಬಾರಿಯ ರಿಯಾಲಿಟಿ ಶೋ ಹೆಸರು ಇಂಡಿಯನ್. ಈಗಾಗಲೇ ಈ ಕಾರ್ಯಕ್ರಮದ ಟ್ರೇಲರ್ಗಳು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ವೀಕ್ಷಕರ ಕುತೂಹಲ ಕೆರಳಿಸಿದೆ.

ಹಲವಾರು ಕಾರ್ಯಕ್ರಮ ನಿರೂಪಿಸಿ ಅನುಭವವಿರುವ ಅಕುಲ್ ಬಾಲಾಜಿ ಈ ಕಾರ್ಯಕ್ರಮದ ನಿರೂಪಕರು. ಇದೊಂದು ಸಾಹಸ ಪ್ರಧಾನ ರಿಯಾಲಿಟಿ ಶೋ ಆಗಿದ್ದು ಭಾರತದ ಮೂಲೆ ಮೂಲೆಯ ಸಾಹಸಿಗರ ಪರಿಚಯ ಇಲ್ಲಿ ಆಗಲಿದೆ. ಎಂಟಿವಿಯ ರೌಡೀಸ್ ಶೋನ ಕನ್ನಡಾವತರಣಿಕೆ ಇದಾಗಿದ್ದು ಟ್ರಾವೆಲ್ ಶೋದಲ್ಲಿ ಏಳು ರಾಜ್ಯಗಳ ಹೊಸ ಹೊಸ ವಿಚಾರಗಳ ಅನ್ವೇಷಣೆಯನ್ನು 14 ಮಂದಿ ಸ್ಪರ್ಧಿಗಳ ಮೂಲಕ ಮಾಡಿಸಲಾಗುತ್ತದೆ. ಏಳು ಮಹಿಳಾ ಹಾಗೂ ಏಳು ಪುರುಷ ಸ್ಪರ್ಧೇಗಳು ಇಲ್ಲಿರುತ್ತಾರೆ.

ಪ್ರತಿವಾರವೂ ಅವರಿಗೊಂದು ಟಾಸ್ಕ್ ನೀಡಲಾಗುತ್ತದೆ. ಅವರ ಶಕ್ತಿ ಸಾಮಥ್ರ್ಯ ಅವಲಂಬಿಸಿ ಪ್ರತಿವಾರ ಎಲಿಮಿನೇಷನ್ ಇರುತ್ತದೆ. ಕರ್ನಾಟಕದ ರುಚಿಕರ ಸ್ವಾದಿಷ್ಟ ತಿಂಡಿ ತಯಾರಿಸುವುದರಿಂದ ಆರಂಭಿಸಿ ರಾಜಸ್ತಾನದ ಮುಂಡಾಸು ಧರಿಸುವವರಗೆ ಟಾಸ್ಕ್ಗಳು ಇರಲಿವೆಯಂತೆ.
ಲಡಾಕ್ನಲ್ಲಿ ಆರಂಭವಾಗುವ ಶೋ ಕನ್ಯಾಕುಮಾರಿಯಲ್ಲಿ ಅಂತ್ಯಗೊಳ್ಳುತ್ತದೆ. ಅಂದರೆ ಸ್ಪರ್ಧೆಗಳು ಹತ್ತು ದಿನಗಳ ಕಾಲ ಒಂದು ರಾಜ್ಯದಲ್ಲಿ ನೆಲೆಸಬೇಕು. ಮೂಲ ರಿಯಾಲಿಟಿ ಶೋನಲ್ಲಿ ಬೈಕ್ ಪ್ರಯಾಣ ಕೈಗೊಳ್ಳಲಾಗಿತ್ತು. ಆದರೆ ಇಲ್ಲಿ ಬೈಕ್ ಬದಲಾಗಿ ಬಸ್ನಲ್ಲಿ ರಾಜ್ಯದಿಂದ ರಾಜ್ಯಕ್ಕೆ ಪಯಣ ಸಾಗಲಿದೆ. ಸ್ಪರ್ಧೆಗಳ ವಿವರ ಸದ್ಯದಲ್ಲೇ ಪ್ರಕಟಗೊಳ್ಳಲಿದೆ.

ವೆಬ್ದುನಿಯಾವನ್ನು ಓದಿ