ಬೆಂಗಳೂರಿಗೆ ಬಂದಿಳಿದ ಹಾಟ್ ಬಾಲೆ ಪೂನಂ ಪಾಂಡೆ

ಸೋಮವಾರ, 7 ಅಕ್ಟೋಬರ್ 2013 (11:22 IST)
PR
ಪೂನಂ ಪಾಂಡೆ ಕನ್ನಡದ ಚಿತ್ರವೊಂದರಲ್ಲಿ ಐಟಂ ಹಾಡಿಗಾಗಿ ಹೆಜ್ಜೆ ಹಾಕಲಿದ್ದಾಳೆ ಎಂಬ ಸುದ್ದಿ ಹೊರಬೀಳುತ್ತಲೇ ಅಯ್ಯೋ ಅದೊಂದು ಗಾಸಿಪ್ ಮಾತ್ರ ಎಂದು ಮೂತಿ ತಿರುವಿದವರೇ ಹೆಚ್ಚು. ಒಂದಷ್ಟು ಪಡ್ಡೆ ಹೈಕಳು ಈ ಸುದ್ದಿ ನಿಜವಾಗಲಿ ದೇವರೇ ಎಂದು ಬೇಡಿಕೊಂಡಿದ್ದೂ ಆಗಿತ್ತಂತೆ. ಇದೀಗ ಬಾಲಿವುಡ್ನ ಹಾಟ್ ಬೆಡಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಈ ಹಾಟ್ ಹುಡುಗಿ ಈಗ ಕೂಲ್ ಸಿಟಿಯಲ್ಲಿ ಅಡ್ಡಾಡುತ್ತಿದ್ದಾರಂತೆ.

ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋ ಖ್ಯಾತಿಯ ರಾಜೇಶ್ ನಟಿಸಿರುವ ಲವ್ ಈಸ್ ಪಾಯಿಸನ್ ಚಿತ್ರದ ಐಟಂ ಸಾಂಗ್ಗಾಗಿ ಪೂನಂ ಪಾಂಡೆಯನ್ನು ಕರೆಯಿಸಲಾಗಿದೆ. ಚಿತ್ರದ ನಾಯಕ ತನ್ನ ಲವ್ ಸಕ್ಸಸ್ ಆದ ಖುಷಿಯಲ್ಲಿ ಪಾರ್ಟಿ ಕೊಡುತ್ತಾನಂತೆ. ಆ ಪಾರ್ಟಿಯಲ್ಲಿ ಪೂನಂ ಪಾಂಡೆ ಹಾಟ್ ಸ್ಟೆಪ್ ಹಾಕಲಿದ್ದಾಳಂತೆ. ಹಾಗಾಗಿ ಪಾರ್ಟಿ ದೃಶ್ಯದಲ್ಲಿ ಪೂನಂ ಪಾಂಡೆ ಸ್ಟೆಪ್ ಹಾಕಲಿದ್ದಾಳಂತೆ.

PR
ಪಾರ್ಟಿ ದೃಶ್ಯದಲ್ಲಿ ಪೂನಂ ಪಾಂಡೆ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವುದಂತೂ ನಿಶ್ಚಿತ. ಹಾಡಿನ ಚಿತ್ರೀಕರಣ ಸೋಮವಾರ ಅಭಿಮಾನ್ ಸ್ಟುಡಿಯೋದಲ್ಲಿ ನಡೆಯಲಿದೆ. ಅದಕ್ಕಿಂತ ಮುನ್ನ ಒಂದು ದಿನದ ರಿಹರ್ಸಲ್ ಕೂಡಾ ನಡೆಯಲಿದ್ದು ಅದೇ ಕಾರಣಕ್ಕೆ ಅವರು ಎರಡು ದಿನ ಮುಂಚೆಯೇ ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗಿದೆ.

ಈಕೆಯೊಂದಿಗೆ ಹೀರೋ ರಾಜೇಶ್ ಕೂಡಾ ಸ್ಟೆಪ್ ಹಾಕಲಿದ್ದಾರಂತೆ. ಹಿಂದಿಯಲ್ಲಿ ಈಕೆ ನಟಿಸಿದ್ದು ನಶಾ ಚಿತ್ರ ಪ್ರೇಕ್ಷಕರಿಗೆ ನಶೆ ಏರಿಸಲು ವಿಫಲವಾಗಿದೆ. ಈ ಬಾರಿಯ ಪಾಯಿಸನ್ ಯಾವ ಇಂಪ್ಯಾಕ್ಟ್ ಮಾಡಲಿದೆ ಎಂದು ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ