ಬ್ಲಾಕ್ ಥಂಡರ್ ಪ್ರಿಯಾಮಣಿ ಮದ್ವೇ ಆಗೇ ಹೋಯ್ತತಂತೆ..!

ಮಂಗಳವಾರ, 17 ಡಿಸೆಂಬರ್ 2013 (11:16 IST)
PR
ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ತನಗೊಂದು ಒಳ್ಳೆಯ ಸ್ಥಾನ ಪಡೆದ ನಟಿ ಪ್ರಿಯಾಮಣಿ. ಕನ್ನಡದ ಈ ಚೆಲುವೆ ಗೆದ್ದಿದ್ದು ಬೇರೆ ಭಾಷೆಗಳಲ್ಲಿ. ಈಕೆ ಹೆಚ್ಚಾಗಿ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಹೀರೋಯಿನ್ ಪ್ರಾಧಾನ್ಯತೆ ಇರುವಂತಹ ಸಿನಿಮಾಗಳಲ್ಲಿ ನಟಿಸಿರುವುದು. ಈಗ ವಿಷಯ ಅದಲ್ಲ, ಈ ನಟಿಗೆ ಮದುವೆ ಆಗಿ ಹೋಗಿದೆ ಎನ್ನುವ ಸುದ್ದಿ ಕಾಲಿ ಮತ್ತು ಟಾಲಿವುಡ್ ಎರಡರಲ್ಲೂ ಹರಿದಾಡುತ್ತಿದೆ.

ಆದರೆ ಈ ರೂಮರ್ಸ್ ಗಳನ್ನು ಆಕೆ ಅಲ್ಲೆಗಳೆದಿಲ್ಲ. ಹಾಗೆಂದು ಹೌದು ಎಂದೂ ಸಹ ಹೇಳಿಲ್ಲ. ಕೆಲವರ ಪ್ರಕಾರ ಈಗಾಗಲೇ ಆಕೆಗೆ ಮದುವೆಯಾಗಿ ಗಂಡನ ಮನೆಗೆ ಹೋಗಿ ಆಗಿದೆ. ಇನ್ನೂ ಕೆಲವರು ಈಕೆ ಮದುವೆಗೆ ಎಲ್ಲಾ ಸಿದ್ಧತೆ ನಡೆದಿದೆ. ಹೀಗೆ ಅನೇಕ ಸುದ್ದಿಗಳು ಪ್ರಿಯಾ ಮದುವೆ ಬಗ್ಗೆ. ಇತ್ತೀಚೆಗೆ ಈ ಸುದ್ದಿಗಳು ಹೊಂದುವಂತೆ ಒಂದು ಸಂಗತಿ ಹೊರ ಬಿದ್ದಿದೆ. ಸಿನಿ ಪತ್ರಿಕೆ ಒಂದಕ್ಕ ಸಂದರ್ಶನ ನೀಡುವಾಗ ಆಕೆ ನನ್ನ ಮದುವೆ ಯ ಸಂಗತಿ ಬಗ್ಗೆ ಸಧ್ಯದಲ್ಲೆ ತಿಳಿಸುತ್ತೇನೆ ಎಂದು ಹೇಳಿದ್ದಾಳೆ. ಸೋ ವಿಷಯ ಸ್ಪಷ್ಟ ಆಯಿತಲ್ಲ.ಈಗ ಪ್ರಿಯಾಮಣಿ ತನ್ನ ಮದುವೆಯ ಸಿದ್ಧತೆಯಲ್ಲಿ ಬ್ಯುಸಿ ಅಂತೆ..!

ವೆಬ್ದುನಿಯಾವನ್ನು ಓದಿ