ಮತ್ತೇ ಮುಂದೆ ಹೋದ ರಾಗಿಣಿ ಐಪಿಎಸ್ !

ಗುರುವಾರ, 19 ಡಿಸೆಂಬರ್ 2013 (11:46 IST)
PR
ಅದ್ಯಾಕೋ ಪಾಪ ರಾಗಿಣಿ ಐಪಿಎಸ್ ಆದಾಗಿನಿಂದ ಚಿತ್ರಕ್ಕೆ ಅಡ್ಡಿ ಆತಂಕಗಳು. ಯಾವರೀತಿ ಅನ್ನುವ ಪ್ರಶ್ನೆ ನಿಮ್ಮನ್ನು ಕಾಡುವುದು ಸಹಜ. ಈ ಚಿತ್ರದ ಮುಖ್ಯ ತಾರಾಗಣದಲ್ಲಿ ರಾಗಿಣಿ ದ್ವಿವೇದಿ ಇದ್ದಾರೆ. ಇದು ರಾಗಿಣಿಯ ಬಹು ನಿರೀಕ್ಷಿತ ಚಿತ್ರವಾಗಿದೆ.

ಮೊಟ್ಟ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣ ಸಿಗುತ್ತಿರುವ ಈ ನಟಿಯ ರಾಗಿಣಿ ಐಪಿಎಸ್ ಚಿತ್ರ ಬಿಡುಗಡೆಯ ದಿನಾಂಕ ಮುಂದೂಡಿದೆ. ಡಿಸೆಂಬರ್ 27ಕ್ಕೆ ಬಿಡುಗಡೆಯ ಭಾಗ್ಯ ಕಾಣ ಬೇಕಾಗಿದ್ದ ಈ ಚಿತ್ರವು ತಿಳಿಸಿದ ದಿನಾಂಕದಲ್ಲಿ ರಿಲೀಸ್ ಆಗುತ್ತಿಲ್ಲ.

ವೆಬ್ದುನಿಯಾವನ್ನು ಓದಿ