'ಮನಸಾಲಜಿ' ಚಿತ್ರದಿಂದ ಅಮೂಲ್ಯ ಬ್ರೇಕ್ ಪಡೆಯುವರೇ?

PR
ಹಾಗೊಂದು ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಇದು ಅಮೂಲ್ಯರನ್ನು ಕಾಡುತ್ತಿರುವ ಪ್ರಶ್ನೆ ಕೂಡಾ ಎಂದರೆ ತಪ್ಪಾಗಲಾರದು. ಏಕೆಂದರೆ 'ಚೆಲುವಿನ ಚಿತ್ತಾರ' ಚಿತ್ರದ ಯಶಸ್ಸಿನ ನಂತರ ಆಕೆ ಅಂಥದ್ದೊಂದು ಚಿತ್ರವನ್ನು ನೀಡಿಯೇ ಇಲ್ಲ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಚಿತ್ರ ಬರುವುದಕ್ಕೂ ಮುಂಚೆ 'ಚಂದು', 'ಕಲ್ಲರಳಿ ಹೂವಾಗಿ', 'ತಿಮ್ಮ' ಇವೇ ಮೊದಲಾದ ಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರನ್ನು ಹದಿಹರೆಯದ ಪ್ರೇಮಕಥೆಯಾದ 'ಚೆಲುವಿನ ಚಿತ್ತಾರ'ಕ್ಕೆ ನಾಯಕಿಯನ್ನಾಗಿಸಿದವರು ಎಸ್.ನಾರಾಯಣ್. ಆ ಚಿತ್ರವೇನೋ ಯಶಸ್ವಿಯಾಯಿತು. ನಂತರ ತಮ್ಮ ಮಗ ಪಂಕಜ್ ನಾಯಕನಾಗಿದ್ದ ಚಿತ್ರಕ್ಕೂ ಅಮೂಲ್ಯಾರನ್ನೇ ನಾಯಕಿಯನ್ನಾಗಿ ನಾರಾಯಣ್ ಆರಿಸಿದರು. ಆದರೆ ಆ ಚಿತ್ರ ವಿಫಲಗೊಂಡಿತು.

ಆದರೆ ನಂತರ ಅವರಿಬ್ಬರ ಮಧ್ಯೆ ಅದೇನು ಮನಸ್ತಾಪ ಬಂದಿತೋ ಗೊತ್ತಿಲ್ಲ. ಪಂಕಜ್‌ನ ಮುಂದಿನ ಚಿತ್ರಕ್ಕೆ ರೂಪಿಕಾ ನಾಯಕಿಯಾಗಿ ಆಯ್ಕೆಯಾದರು. ಈ ನಡುವೆ ರತ್ನಜ ನಿರ್ದೇಶನದ 'ಪ್ರೇಮಿಸಂ' ಚಿತ್ರವು ತೆರೆಕಂಡಿತು. ಆ ಚಿತ್ರವೂ ಸಹ ವಿಫಲಗೊಂಡಿತು.

ಈಗ 'ಮನಸಾಲಜಿ' ಚಿತ್ರವನ್ನು ಅವರ ಅಣ್ಣ ದೀಪಕ್ ಅರಸ್ ನಿರ್ದೇಶಿಸಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಅನೂಪ್ ಸೀಳೀನ್ ಸಂಗೀತ, ಜೋನಿ ಹರ್ಷ ಸಂಕಲನವಿರುವ ಈ ಚಿತ್ರ ಗೆಲ್ಲಲೇಬೇಕಿರುವುದು ಅಮೂಲ್ಯಾಗಿರುವ ಅನಿವಾರ್ಯತೆಯಾಗಿದೆ. ಅದು ನೆರವೇರಲಿ ಎಂದು ಹರಸುವ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ