ಮಳೆ ಬರಲಿ ಮಂಜೂ... ಚಿತ್ರದಲ್ಲಿ ಪಾರ್ವತಿ ಮೆನನ್‌

ಮಿಲನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಲೆಯಾಳಂನ ಈ ನಗುಮುಖದ ಸುಂದರಿ ಪಾರ್ವತಿ ಮೆನನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಇವರ ಮಳೆ ನಿಂತು ಹೋದ ಮೇಲೆ ಹಾಡು ಎಲ್ಲರ ಬಾಯಲ್ಲೂ ಇಂದಿಗೂ ಗುನುಗುತ್ತಿದೆ. ಮಿಲನ ನಂತರ ಈಕೆಗೆ ಕನ್ನಡದಲ್ಲಿ ಅನೇಕ ಆಫರ್‌ಗಳು ಅರಸಿ ಬಂದವು.

ಆದರೆ ವಿದ್ಯಾಭ್ಯಾಸದ ದೃಷ್ಟಿಯಿಂದ ಯಾವುದನ್ನು ಒಪ್ಪಿಕೊಳ್ಳಲಿಲ್ಲ ಈಗ ಈಕೆ ನಟಿಸಿರುವ ಮಳೆ ಬರಲಿ ಮಂಜೂ ಇರಲಿ ಚಿತ್ರ ಬಿಡುಗಡೆಯಂಚಿನಲ್ಲಿದೆ.

ಚಿತ್ರಕ್ಕೆ ನೈಜತೆ ಬರುವ ದೃಷ್ಟಿಯಿಂದ ಇವರೇ ಕನ್ನಡ ಕಲಿತು ಡಬ್ ಮಾಡಿದ್ದಾರೆ. ಕನ್ನಡ ಕಲಿಯಲು ಚಿತ್ರದ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಪಾರ್ವತಿಗೆ ತುಂಬಾ ಸಹಾಯ ಮಾಡಿದ್ದಾರಂತೆ.

ಪಾರ್ವತಿ ಕನ್ನಡ ಚಿತ್ರರಂಗ ಅಲ್ಲದೆ ತಮಿಳು, ಮಲೆಯಾಳಂನಲ್ಲಿ ಕೂಡ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆಯಾದ ಪೂ ತಮಿಳು ಚಿತ್ರದಲ್ಲಿ ಇವರ ಅಭಿನಯ ಕಂಡು ಇಡೀ ತಮಿಳು ಚಿತ್ರರಂಗ ಬೆರಗಾಗಿತ್ತು. ನಾನು ಯಾವ ಭಾಷೆಯಲ್ಲಿ ನಟಿಸಿದರೂ ಆ ಭಾಷೆ ಕಲಿಯಬೇಕು ಎಂಬ ಬಯಕೆ ನನ್ನದು ಅಂತಾರೆ ಪಾರ್ವತಿ.

ಮತ್ತೊಂದು ವಿಶೇಷ ಎಂದರೆ ಇವರಿಗೆ ಹಾಡಲು ಬರುತ್ತದೆ. ಮಳೆ ಬರಲಿ ಮಂಜೂ ಇರಲಿ ಚಿತ್ರದಲ್ಲಿ ಒಂದು ಹಾಡನ್ನು ಇವರೇ ಹಾಡಿದ್ದಾರೆ. ಅಂತೂ ಈ ಮುದ್ದು ಮುಖದ ಬೆಡಗಿಯ ಈ ಚಿತ್ರವೂ ಯಶಸ್ವಿಯಾಗಲಿ.

ವೆಬ್ದುನಿಯಾವನ್ನು ಓದಿ