ಮಸ್ತ್ ಮೊಹಬ್ಬತ್ ಇದು ನೆನಪಿರಲಿ ಪ್ರೇಂ ಪ್ರೇಮಕಹಾನಿ ...!

ಶುಕ್ರವಾರ, 18 ಏಪ್ರಿಲ್ 2014 (10:46 IST)
PR
ಪ್ರೇಂ ನಟನೆಯ ಬಹು ನಿರೀಕ್ಷಿತ ಚಿತ್ರ ಮಸ್ತ್ ಮೊಹಬತ್. ಆರಂಭಿಕ ಹಂತದಲ್ಲೇ ಈ ಚಿತ್ರ ಹೀರೋಯಿನ್ ಗೆ ಸಂಬಂಧ ಪಟ್ಟಂತೆ ಅನೇಕ ಅಡೆತಡೆ ಎದುರಿಸಿತು. ಚಿತ್ರಕ್ಕೆ ನಾಯಕಿ ಬದಲಾವಣೆ ಆಗ ಬೇಕಾದ ಪರಿಸ್ಥಿತಿ ಎದುರಾಗಿತ್ತು. ಈಗ ಅವೆಲ್ಲ ಆತಂಕಗಳನ್ನು ದೂರ ಮಾಡಿಕೊಂಡು ಚಿತ್ರವು ಯಶಸ್ವಿಯಾಗಿ ಊಟಿಯಲ್ಲಿ 10 ದಿವಸಗಳ ಚಿತ್ರೀಕರಣ ಮುಗಿಸಿ ಬಂದಿದೆ.

ಈ ಚಿತ್ರದಲ್ಲಿ ಕೇವಲ ಪ್ರೇಮ ಮಾತ್ರವಲ್ಲ ತಂಗಿ ಸೆಂಟಿಮೆಂಟ್ ಸಹ ಇದೆಯಂತೆ . ಮಾತಿನ ಭಾಗ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ ಎಂದಿದ್ದಾರೆ ನಿರ್ಮಾಪಕ ವಿ.ಶೇಖರ್.ಇದು ಮಾನಸ ಮೂವೀಸ್ ಲಾಂಛನದಲ್ಲಿ ತಯಾರುಗುತ್ತಿರುವ ಚಿತ್ರವಾಗಿದೆ .

'
PR
ಮಸ್ತ್ ಮೊಹಬ್ಬತ್' ಚಿತ್ರಕ್ಕೆ ಊಟಿಯಲ್ಲಿ ಪ್ರೇಂ (ನೆನಪಿರಲಿ), ಪೂನಂ, ಅರ್ಚನ, ರಾಜುತಾಳಿಕೋಟೆ, ಶಕೀಲಾ, ಚಿಕ್ಕಣ್ಣ ಮುಂತಾದವರು ಹತ್ತು ದಿನಗಳ ಚಿತ್ರೀಕರಣದ ಭಾಗವಾಗಿದ್ದರು. ಮೋಹನ್ ಮಾಳಗಿ ನಿರ್ದೆಶನದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ , ವೇಣುಗೋಪಾಲ್ ಅವರು ಕಥೆ,ಮೋಹನ್ ಮಾಳಗಿ, ಗಿರೀಶ್ ಕಂಪ್ಲಾಪುರ್ ಹಾಗೂ ವೇಣುಗೋಪಾಲ್ ಚಿತ್ರಕಥೆ ಚಿತ್ರಕತೆ ಇದೆ.

ಗೌಸ್ ಪೀರ್ 'ಮಸ್ತ್ ಮೊಹಬತ್ 'ಗೆ ಸಂಭಾಷಣೆ ಬರೆದರೆ ಜಯಂತಕಾಯ್ಕಿಣಿ ಹಾಗೂ ಕವಿರಾಜ್ ಗೀತರಚನೆ ಸಿದ್ಧ ಮಾಡಿದ್ದಾರೆ. ವಿಜಯ್.ಸಿ.ಕುಮಾರ್ ಅವರ ಛಾಯಾಗ್ರಹಣ, ಈಶ್ವರ್ ಸಂಕಲನ, ಮೋಹನ್ ಪಂಡಿತ್ ಕಲಾನಿರ್ದೇಶನವಿರುವ ಈ ಪೂನಂ, ನವೀನ್ ಕೃಷ್ಣ, ರಾಜುತಾಳಿಕೋಟೆ, ಸಾಧುಕೋಕಿಲ, ಸ್ವಯಂವರ ಚಂದ್ರು, ಅಶ್ವಿನ್, ಅರ್ಚನ, ಶಕಿಲಾ, ಚಿಕ್ಕಣ್ಣ ಇನ್ನು ಅನೇಕರು ನೆನಪಿರಲಿ ಪ್ರೇಂ ಅವರ ಜೊತೆಯಾಗಿದ್ದಾರೆ ಮೊಹಬ್ಬತ್ ಮಾಡಲು !

ವೆಬ್ದುನಿಯಾವನ್ನು ಓದಿ