ಮಸ್ತ್ ಹುಡುಗಿ ಕೇರ್ ಆಫ್ ಫುಟ್ ಪಾತ್ 2 ರ ಮೂಲಕ ಕನ್ನಡಕ್ಕೆ ರೀ ಎಂಟ್ರಿ ?

ಶನಿವಾರ, 4 ಜನವರಿ 2014 (10:09 IST)
PR
ಮಸ್ತ್ ಮಸ್ತ್ ಹುಡ್ಗಿ ಬಂದ್ಲು ಹಾಯ್ ಹಾಯಿರೋ ಎನ್ನುವ ಹಾಡಿನಲ್ಲಿ ತನ್ನ ಮಾದಕ ಮೈ ತಿರುಗಿಸುತ್ತಾ ನರ್ತಿಸಿದ ನಟಿ ರವಿನಾ ಟಂಡನ್. ಆಕೆಯ ನಟನೆ , ರೂಪಸಿರಿ ಇಡಿ ಕನ್ನಡ ರಸಿಕರನ್ನು ಸೆಳೆದಿತ್ತು. ಉಪೇಂದ್ರ ಚಿತ್ರದಲ್ಲಿ ನಟಿಸಿದ್ದ ಈ ಚೆಲುವೆ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಕನ್ನಡದ ಗಿನ್ನಿಸ್ ದಾಖಲೆಯ ನಟ ಮಾಸ್ಟರ್ ಕಿಶನ್ ಅವರು ನಿರ್ದೇಶಿಸುತ್ತಿರುವ ಕೇರ್ ಆಫ್ ಫುಟ್ ಪಾತ್ 2 ಚಿತ್ರದಲ್ಲಿ ನಟಿ ರವೀನಾ ಟಂಡನ್ ನಟಿಸುವು ಸಾಧ್ಯತೆಗಳು ಹೆಚ್ಚಾಗಿವೆ. ಈ ಚಿತ್ರವೂ ಕನ್ನಡ ಹಾಗು ಹಿಂದಿ ಭಾಷೆಗಳಲ್ಲಿ ಸಿದ್ಧ ಆಗುತ್ತಿದೆ. ಮೊದಲ ಅವತರಣಿಕೆಯಲ್ಲಿ ನಟ ಜಾಕಿ ಶ್ರಾಫ್ ಸೇರಿದಂತೆ ಅನೇಕ ದಿಗ್ಗಜ ನಟರು ನಟಿಸಿದ್ದರು. ಈಗ ರವಿನಾ ಟಂಡನ್ ನಟಿಸುತ್ತಿದ್ದಾರೆ ಎಂದರೆ ಚಿತ್ರದಲ್ಲಿ ವಿಶೇಷವಾದ ಸಂಗತಿಗಳು ಇದ್ದೆ ಇದೆ ಎಂದಾಯಿತು. ಈ ಚಿತ್ರದಲ್ಲಿ ರವಿನಾ ಅಡ್ವೋಕೇಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲೂ ನಟ ಜಾಕಿ ಶ್ರಾಫ್ ನಟಿಸುತ್ತಿದ್ದಾರೆ ಮುಖ್ಯ ಪಾತ್ರದಲ್ಲಿ.

ವೆಬ್ದುನಿಯಾವನ್ನು ಓದಿ