ಮಾಣಿಕ್ಯ ಸದ್ಯಕ್ಕೆ ಬಿಡುಗಡೆ ಮಾಡಲ್ಲ ಅಂದಿದ್ದಾರೆ ಕಿಚ್ಚ ಸುದೀಪ್ .. ಹಾಗಾದ್ರೆ ಎಂದು ರಿಲೀಸ್ ?

ಶುಕ್ರವಾರ, 14 ಮಾರ್ಚ್ 2014 (10:13 IST)
PR
ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ ಮಾಣಿಕ್ಯ. ಇದರಲ್ಲಿ ಅವರು ನಿರ್ದೇಶನ ಮಾಡಿರುವುದರೊಂದಿಗೆ ನಟಿಸಿದ್ದಾರೆ. ಮಾಣಿಕ್ಯ ಚಿತ್ರಕ್ಕೆ ಸಂಬಂಧಪಟ್ಟಂತೆ ಅನೇಕ ಹೊಸ ಸುದ್ದಿಗಳು ಹೊರ ಬರುತ್ತಲೇ ಅದರ ಬಗ್ಗೆ ಕಿಚ್ಚ ಅವರ ಅಭಿಮಾನಿಗಳಿಗೆ ಹೆಚ್ಚು ಆಸಕ್ತಿ ಬೆಳೆಸುವಂತೆ ಮಾಡಿತ್ತು.

ಮುಖ್ಯವಾಗಿ ಈ ಚಿತ್ರ ಎಂದು ಬಿಡುಗಡೆ ಆಗುತ್ತಾದೆ ಎಂದು ಕಾಯುವಂತೆ ಮಾಡಿರುವುದು ಸಹ ಸುಳ್ಳಲ್ಲ.

ಈ ಚಿತ್ರದ ಬಿಡುಗಡೆ ಎಂದಾಗುತ್ತದೆ ಎನ್ನುವ ಕುತೂಹಲ ಅನೇಕರನ್ನು ಕಾಡಿತ್ತು. ಉಗಾದಿ ಹಬ್ಬದಲ್ಲಿ ಚಿತ್ರದ ಬಿಡುಗಡೆ ಎನ್ನುವ ಸಂಗತಿಯು ಸಹ ಬಹುತೇಕ ನಿಶ್ಚಯ ಆಗಿತ್ತು.

ವೆಬ್ದುನಿಯಾವನ್ನು ಓದಿ