ಮಾತಿನ ಭಾಗ ಮುಗಿಸಿದ ಪ್ರೀತಿಯ ಹಂಗಾಮ

ಗುರುವಾರ, 8 ಜನವರಿ 2009 (20:33 IST)
ಪ್ರೀತಿ ಅರ್ಥ ಕಳೆದುಕೊಂಡಿದೆ. ಎಲ್ಲರಿಗೂ ವ್ಯಕ್ತಿಗತ ಸಾಧನೆಯೇ ಮುಖ್ಯವಾಗಿರುತ್ತದೆ. ಸ್ವಾರ್ಥ ಸಾಧನೆಯ ಹಾದಿಯಲ್ಲಿ ಭವಿಷ್ಯದ ಖುಷಿ ಮಸುಕಾಗುತ್ತದೆ. ಇಂದಿನ ಯುವ ಪೀಳಿಗೆ ಪ್ರೀತಿಯಲ್ಲಿಯೂ ಹುಡುಗಾಟವಾಗುತ್ತದೆ. ಇಂತಹ ಪ್ರೀತಿ ಬದುಕಿಗೆ ಯಾವ ರೀತಿ ತೊಡಕಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇನೆ ಎಂದರು ಪ್ರೀತಿಯ ಹಂಗಾಮ ಚಿತ್ರದ ನಿರ್ದೇಶಕ ಹಾಗೂ ನಾಯಕ ವಿವೇಕ್ ರಾಜ್ ಹೇಳಿದರು.

ಹುಡುಗಾಟ ಹಾಗೂ ಪ್ರೀತಿಯನ್ನು ಅವರು ಹಾಸ್ಯ ಮಿಶ್ರಿತ ಶೈಲಿಯಲ್ಲಿ ನಿರೂಪಿಸಿದ್ದಾರೆ. ಚಿತ್ರವನ್ನು ಗಂಭೀರವಾಗಿ ಬರುವಂತೆ ಮಾಡಲು ವಿವೇಕ್ ಆರು ತಿಂಗಳು ಕುಳಿತು ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ. ಮಾತಿನ ಭಾಗದ ಚಿತ್ರೀಕರಣ ಮುಗಿಯುತ್ತಿದ್ದಂತೆ ಸಂಕಲನ ಕೆಲಸ ಆರಂಭವಾಗಿದೆ. ಸದ್ಯ ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಚಿತ್ರಿಸುವುದಷ್ಟೇ ಬಾಕಿ ಇದೆ. ತೆಲುಗು ಮೂಲದ ರಾಜ್‌ಕಿರಣ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ವಿವೇಕ್‌ರಾಜ್ ಎಲ್ಲಾ ತಯಾರಿಯೊಂದಿಗೆ ನಿರ್ದೇಶನಕ್ಕಿಳಿದಿದ್ದಾರೆ. ಚೆನ್ನೈಯಲ್ಲಿ 5 ವರ್ಷ ಸಿನಿಮಾಗೆ ಸಂಬಂಧಿಸಿದಂತೆ ಹಲವು ವಿಭಾಗಗಳಲ್ಲಿ ಕಲಿತಿರುವುದರಿಂದ ಇವರಿಗೆ ನಿರ್ದೇಶನ, ನಟನೆ ಕಷ್ಟವಾಗಲಿಲ್ಲವಂತೆ. ತಮಿಳು ನಟಿ ಊರ್ವಶಿ ಚಿತ್ರದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರ ಮಾಡಿದ್ದಾರೆ. ಅನಂತ್‌ನಾಗ್, ಅವಿನಾಶ್ ಕೂಡಾ ಚಿತ್ರದ ತಾರಾಗಣದಲ್ಲಿದ್ದಾರೆ. ಕರಾವಳಿ ಕನ್ಯೆ ಶುಭಾ ಪೂಂಜಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ