ಮಿಂಚಿಂಗ್ ಕೋಮಲ್....

ಸೋಮವಾರ, 19 ಜನವರಿ 2009 (16:20 IST)
MOKSHA
ಸಂಗಮ ಚಿತ್ರದ ಮೂಲಕ ನಟ ಕೋಮಲ್ ಮತ್ತೊಮ್ಮೆ ಮಿಂಚಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾದ ಬಹುತೇಕ ಚಿತ್ರಗಳಲ್ಲಿ ಕೋಮಲ್ ನಟಿಸಿರುವುದು ಮತ್ತೊಂದು ವಿಶೇಷ.

ದಿನೇಶ್ ಬಾಬು ನಿರ್ದೇಶನದ ಮಿಸ್ಟರ್ ಗರಗಸ ಚಿತ್ರ ಕೂಡ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟಿತು. ಬಾಲಿವುಡ್‌ಗಷ್ಟೇ ಸೀಮಿತವಾಗಿದ್ದ ಹಾಸ್ಯ ಚಿತ್ರಗಳು ಕನ್ನಡದಲ್ಲಿಯೂ ಗೆಲ್ಲಬಲ್ಲವು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

ಇದೀಗ ಕೋಮಲ್ ಮತ್ತೊಂದು ಚಿತ್ರದತ್ತ ದೃಷ್ಟಿ ನೆಟ್ಟಿದ್ದಾರೆ. ಅವರ ಮುಂದಿನ ಚಿತ್ರ ಸಧ್ಯದಲ್ಲಿಯೇ ಪ್ರಾರಂಭವಾಗಲಿದೆ. ಇನ್ನೆರಡು ವಾರಗಳಲ್ಲಿ ಚಿತ್ರದ ಬಗ್ಗೆ ಅಧಿಕೃತ ಸುದ್ದಿ ದೊರಕಲಿದೆ ಎನ್ನುತ್ತಾರೆ ಕೋಮಲ್. ಏನೇ ಇರಲಿ. ಹಾಸ್ಯ ಇರಲಿ ಅಲ್ಲವೇ?

ವೆಬ್ದುನಿಯಾವನ್ನು ಓದಿ