ಮ್ಯಾಡ್ ಲವ್ ಚಿತ್ರದಲ್ಲಿ ಗೌಡರು

ಗುರುವಾರ, 6 ಸೆಪ್ಟಂಬರ್ 2007 (16:51 IST)
ಚಿತ್ರರಂಗದ ಬಾಗಿಲು ಎಲ್ಲರಿಗೂ ತೆರೆದಿದೆ. ರಾಜಕಾರಣಿಗಳು, ಪತ್ರಕರ್ತರಿಂದ ಹಿಡಿದು ಸಾಹಿತಿಗಳವರೆಗೆ. ಇದೀಗ ಮತ್ತೋರ್ವ ಖ್ಯಾತ ಸಾಹಿತಿ ದೊಡ್ಡರಂಗೇಗೌಡರ ಸರದಿ.

ಮ್ಯಾಡ್ ಲವ್ ಚಿತ್ರ ನಿರ್ದೇಶಕ ತೇಜ ದೊಡ್ಡ ರಂಗೇಗೌಡರ ಶಿಷ್ಯ. ಮೊದಲಿಗೆ ಬರಹಗಾರನಾಗಿ ಗುರ್ತಿಸಿಕೊಂಡು ನಂತರದ ದಿನಗಳ್ಲಿ ನಿರ್ದೇಶಕನ ಪಟ್ಟಕ್ಕೇರಿದ ತೇಜ ಗುರುಕಾಣಿಕೆಯನ್ನು ಸಲ್ಲಿಸುವ ನೆವದಲ್ಲಿ ದೊಡ್ಡ ರಂಗೇಗೌಡರನ್ನು ತನ್ನೆಡೆಗೆ ಎಳೆದಿದ್ದಾನೆ

ಚಿತ್ರದಲ್ಲೂ ದೊಡ್ಡ ರಂಗೇಗೌಡರದು ನಾಯಕಿಯ ತಂದೆಯ ಪಾತ್ರ. ಚಿತ್ರದ ಕಾನ್ಸೆಪ್ಟ್ ಬಗ್ಗೆ ಕೇಳಿದ್ದಕ್ಕೆ ಪ್ರೀತಿ ಹಲವು ರೀತಿಯದು,

ಕೆಲವರು ಪ್ರೀತೀನೇ ಲವ್ ಅನ್ತಾರೆ ಮತ್ತೆ ಕೆಲವರಿಗೆ ಬಲವಂತದ ಲವ್ ಅಂದ್ರೆ ಇಷ್ಟ. ನೋಡಿ ಪ್ರೀತಿ ಅನ್ನೋದು ಸಹಜ ಪ್ರಕ್ರಿಯೆ. ಅದೊಂದು ಸ್ವಾಭಾವಿಕ, ಯಾವುದೇ ಗುಣಾ ಗುಣಾವಶೇಷಗಳು ಅದಕ್ಕಿಲ್ಲ. ಆದರೆ ಈ ಚಿತ್ರದಲ್ಲಿ ಪ್ರೀತಿ ಸಹಜವಾದುದಲ್ಲ ಅದೊಂಥರಾ ಹುಚ್ಚು ಪ್ರೀತಿ ಹಾಗಾಗೇ ಇದು ಮ್ಯಾಡ್ ಲವ್.

ಸಾಧಾರಣವಾಗಿ ಚುಟುಕು ಗುಟುಕಿನಲ್ಲೇ ಹೊಟ್ಟೆ ತುಂಬಿಸುತ್ತಿದ್ದ ಆ ದೊಡ್ಡ ರಂಗೇಗೌಡರೆಲ್ಲಿ ಇಂದು ಮ್ಯಾಡ್ ಲವ್‌ನಿಂದಾಗಿ ಪ್ರೀತಿಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಿರುವ ಈ ದೊಡ್ಡರಂಗೇಗೌಡರೆಲ್ಲಿ ಅಂತ ಒಂದು ಅರೆಕ್ಷಣ ಅನಿಸದೇ ಇರಲಿಲ್ಲ.

ವೆಬ್ದುನಿಯಾವನ್ನು ಓದಿ