ಯೋಗೇಶ್‌ರಿಂದ ಶಿವಣ್ಣನ ಗುಣಗಾನ

ಗುರುವಾರ, 8 ಜನವರಿ 2009 (20:13 IST)
MOKSHA
ಅದು ಮಸ್ತ್ ಮಜಾ ಮಾಡಿ ಚಿತ್ರದ ಕ್ಯಾಸೆಟ್ ಬಿಡುಗಡೆ ಸಮಾರಂಭ. ನಿರ್ಮಾಪಕ ಸೌಂದರ್ಯ ಜಗದೀಶ್ ವೇದಿಕೆ ಮೇಲೆ ಸುಮಾರು 30 ಕಲಾವಿದರಿಂದ ಚಿತ್ರದ ಆಡಿಯೋ ಕ್ಯಾಸೆಟ್ ಬಿಡುಗಡೆ ಮಾಡಿಸಬೇಕೆಂದು ಎಲ್ಲರನ್ನು ಅಲ್ಲಿಗೆ ಕರೆದಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಕೂಡಾ ಉಪಸ್ಥಿತರಿದ್ದರು.

ವೇದಿಕೆಯ ಕೊನೆಯಲ್ಲಿ ಯೋಗೇಶ್ ಕುಳಿತಿದ್ದರು. ಅವರನ್ನು ಕಂಡ ಶಿವರಾಜ್ ಕುಮಾರ್ ಯೋಗೇಶ್‌ನನ್ನು ಕರೆದು ತಮ್ಮ ಪಕ್ಕ ಕೂರಿಸಿಕೊಂಡರು. ನಂತರ ಕ್ಯಾಸೆಟ್ ಬಿಡುಗಡೆ ನಡೆಯಿತು. ವೇದಿಕೆ ಕೆಳಗಿಳಿದು ಬಂದ ಯೋಗೇಶ್ ಶಿವಣ್ಣ ನಡೆದುಕೊಂಡ ರೀತಿಯ ಗುಣಗಾಣ ಮಾಡತೊಡಗಿದರು.

'ಶಿವಣ್ಣರಂಥ ದೊಡ್ಡ ನಟ ನನ್ನನ್ನು ಗುರುತಿಸಿ ಹತ್ತಿರಕ್ಕೆ ಕರೆದು ಕೂರಿಸಿದ್ದಾರೆ. ಅವರ ದೊಡ್ಡತನ ನನಗೆ ತುಂಬಾ ಖುಷಿ ಕೊಟ್ಟಿತು. ಚಿಕ್ಕಂದಿನಿಂದಲೂ ನಾನು ಅವರ ಚಿತ್ರಗಳನ್ನು ನೋಡಿ ಬೆಳೆದಿದ್ದೇನೆ. ಅವರು ತೆರೆ ಮೇಲಷ್ಟೇ ಉದಾರಿಯಲ್ಲ. ನಿಜ ಜೀವನದಲ್ಲೂ ಉದಾರಿ' ಎಂದರು.

ನಿರ್ದೇಶಕ ಅನಂತರಾಜು ಇದು ಶೇ 100 ರಷ್ಟು ಮನರಂಜನಾತ್ಮಕ ಚಿತ್ರ. ನೋಡುವ ಪ್ರೇಕ್ಷಕರು ಮಸ್ತ್ ಮಜಾ ಮಾಡಲಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ