ರಭಸದಿಂದ ಮುನ್ನುಗ್ಗುತ್ತಿದೆ ಉಗ್ರಂ, ಬ್ರಹ್ಮ ಮತ್ತು ಭಜರಂಜಿ.. ಈಗ ಕನ್ನಡ ಸಿನಿಮಾಗಳ ಕಾಲ!

ಸೋಮವಾರ, 24 ಮಾರ್ಚ್ 2014 (09:47 IST)
PR
ಎಷ್ಟೇ ಚೆಂದದ ಚಿತ್ರಕಥೆ, ಕಲಾವಿದ ವರ್ಗ, ಹಾಡುಗಳು ಇದ್ದರು ಅದ್ಯಾಕೋ ಕನ್ನಡ ಚಿತ್ರಗಳು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲ ಆಗ್ತಾನೆ ಬಂದಿತ್ತು. ಇದರಿಂದ ಹಣ ಹೂಡುವ ನಿರ್ಮಾಪಕ ಕಂಗಾಲಾಗಿ ಬಿಟ್ಟಿದ್ದು ಸತ್ಯ. ಆದರೆ ಈಗಿನ ಪರಿಸ್ಥಿತಿ ಬದಲಾಗಿದೆ.

ಕನ್ನಡ ಚಿತ್ರರಂಗಕ್ಕೆ 2014 ವರವಾಗಿ ಪರಿಣಮಿಸಿದೆ ಎಂದೇ ಹೇಳ ಬಹುದಾಗಿದೆ. ಕಳೆದ ವರ್ಷ ಬಿಡುಗಡೆ ಆದ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ, ಈ ವರ್ಷದಲ್ಲಿ ಬಿಡುಗಡೆ ಕಂಡ ಉಪೇಂದ್ರ ಅವರ ಬ್ರಹ್ಮ, ಶ್ರೀ ಮುರಳಿ ಯವರ ಉಗ್ರಂ ಬಾಕ್ಸಾಫೀಸಲ್ಲಿ ಉತ್ತಮ ಫಲಿತಾಂಶ ನೀಡಿದೆ.

PR
ಕಳೆದ ವರ್ಷದ ಕೊನೆಯಲ್ಲಿ ರಿಲೀಸ್ ಆದ ಭಜರಂಗಿ 50 ದಿನಗಳಲ್ಲಿ ಒಳ್ಳೆಯ ಗಳಿಕೆ ಸಾಧಿಸಿತು. ಅಲ್ಲದೆ ಅದೀಗ ನೂರು ದಿನಗಳನ್ನು ಮುಟ್ಟಿದೆ. ಅದೇ ರೀತಿ ಬ್ರಹ್ಮ ಚಿತ್ರವೂ ಸಹಿತ 50 ದಿನಗಳ ಬಾಗಿಲು ತಟ್ಟಿದೆ. ಉಗ್ರಂ ಫಲಿತಾಂಶವು ಸಹಿತ ಅತ್ಯುತ್ತಮವಾಗಿದೆ.

ಭಜರಂಗಿ ಕಳೆದ ವರ್ಷದಲ್ಲಿ ಬಿಡುಗಡೆ ಆದರೂ ಈ ವರ್ಷವೂ ಪ್ರದರ್ಶನ ಕಾಣುತ್ತಿರುವುದರಿಂದ ಅದು ಈ ವರ್ಷದ ಪಟ್ಟಿಗೆ ಸೇರ್ಪಡೆ ಆಗುತ್ತದೆ . ಅದೇ ರೀತಿ ಇನ್ನು ಅನೇಕ ಕನ್ನಡ ನಿರೀಕ್ಷಿತ ಚಿತ್ರಗಳು ಯಶಸ್ಸಿನ ಹಾದಿಯಲ್ಲಿದೆ. ಅವುಗಳು ಖಂಡಿತವಾಗಿಯೂ ಈ ವರ್ಷ ಉತ್ತಮ ಧಾಖಲೆಯನ್ನು ನಿರ್ಮಿಸುತ್ತದೆ ಎಂದು ನಂಬಿದ್ದಾರೆ ಚಿತ್ರ ಪಂಡಿತರು .. ಅಂತ ಫಲಿತಾಂಶ ಕನ್ನಡ ಚಿತ್ರರಂಗದ ಕೈ ಸೇರಲಿ.

ವೆಬ್ದುನಿಯಾವನ್ನು ಓದಿ