ವೀಣಾ ಮಲ್ಲಿಕ್ ಸಿಲ್ಕ್ ಸಖತ್ ಹಾಟ್' ಚಿತ್ರಕ್ಕೆ ಎ ಸರ್ಟಿಫಿಕೆಟ್

ಗುರುವಾರ, 13 ಜೂನ್ 2013 (11:57 IST)
PR
PR
ಪಾಕಿಸ್ತಾನದ ಹಾಟ್ ಬ್ಯೂಟಿ ವೀಣಾ ಮಲ್ಲಿಕ್ ಅಭಿನಯದ ಕನ್ನಡ ಚಿತ್ರ 'ಸಿಲ್ಕ್ ಸಖತ್ ಹಾಟ್' ಚಿತ್ರ ಸೆನ್ಸಾರ್ನಲ್ಲಿ ವಯಸ್ಕರ ಸರ್ಟಿಫಿಕೆಟ್ (ಎ ಸರ್ಟಿಫಿಕೆಟ್) ನೀಡಿದೆ.

ಚಿತ್ರದ ಆಡಿಯೊ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಆರಂಭದಲ್ಲಿ ಚಿತ್ರಕ್ಕೆ ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಎಂದು ಹೆಸರಿಡಲಾಗಿತ್ತು. ಬಾಲಿವುಡ್ ನಿರ್ಮಾಪಕಿ ಎಕ್ತಾ ಕಪೂರ್ ಕೋರ್ಟನಲ್ಲಿ ದಾವಾ ಹೂಡಿ ಗೆದ್ದರು. ಪರಿಣಾಮ ಚಿತ್ರದ ಶೀರ್ಷಿಕೆ ಸಿಲ್ಕ್ ಸಖತ್ ಹಾಟ್ ಎಂದು ಬದಲಾಯಿತು.

ವೀಣಾ ಅಭಿನಯದ ಮೊದಲ ಕನ್ನಡ ಚಿತ್ರವಿದು. ಅಕ್ಷಯ್ ಎಂಬ ಹೊಸ ನಾಯಕ ನಟ ಈ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯವಾಗಿದ್ದಾರೆ. ಪಾಕ್ ನಟಿ ವೀಣಾರನ್ನು ಕನ್ನಡಕ್ಕೆ ತಂದ ಕ್ರೆಡಿಟ್ ನಿರ್ಮಾಪಕ ವೆಂಕಟಪ್ಪ ಅವರಿಗೆ ಸಲ್ಲಬೇಕು.

ಸೆನ್ಸಾರ್ನಲ್ಲಿ ಚಿತ್ರ ಪಾಸಾಗುವುದೋ ಇಲ್ಲವೋ ಎಂಬ ಭೀತಿ ವೆಂಕಟಪ್ಪ ಅವರಿಗೆ ಕಾಡುತ್ತಿತ್ತಂತೆ. ಈಗ ಎ ಸರ್ಟಿಫಿಕೆಟ್ ಸಿಕ್ಕಿರುವುದು ಅವರ ನಿಟ್ಟುಸಿರಿಗೆ ಕಾರಣವಾಗಿದೆ. ಜುಲೈನಲ್ಲಿ ಚಿತ್ರ ತೆರೆಗೆ ಬರಲಿದೆಯಂತೆ.
ಅಂದ ಹಾಗೆ ಇದು ಹಿಂದಿಯ ಡರ್ಟಿ ಪಿಕ್ಚರ್ನ ರಿಮೇಕ್ ಅಲ್ಲ. ಆ ಚಿತ್ರದಿಂದ ಸ್ಪೂರ್ತಿ ಪಡೆದಿದೆ ಎಂಬುದಷ್ಟೇ ಸತ್ಯ.

ವೆಬ್ದುನಿಯಾವನ್ನು ಓದಿ