ವೇಶ್ಯೆಯ ಸಂಗ.. ಮಾಧ್ಯಮಗಳಿಂದ ಅಭಿಮಾನ ಭಂಗ !

ಸೋಮವಾರ, 11 ನವೆಂಬರ್ 2013 (13:33 IST)
PR
ಟೀನೇಜ್ ಪಾಪ್ ಸ್ಟಾರ್ ಜಸ್ಟಿನ್ ಬಿಬೇರ್ ಅರ್ಜೆಂಟಿನ ದೇಶಕ್ಕೆ ಸೇರಿದವ. ಆತನ ಐಲಾಟಗಳು ವಯಸ್ಸಿಗಿಂತ ಹೆಚ್ಚು. ಸ್ವಲ್ಪ ವಯಸ್ಸು ಬಂದ ತಕ್ಷಣ ಹುಡುಗಿ ಅದು ಇದು ಅಂತ ಡಿಂಗು ಡಾ೦ಗು ಮಾಡಿ ಆತ ವಿಶ್ವದ ಗಮನ ಸೆಳೆದಿದ್ದಾನೆ. ಇತ್ತೀಚೆಗೆ ಮತ್ತೊಂದು ಸಂಗತಿ ಮೂಲಕ ಆತನ ಬಗ್ಗೆ ಎಲ್ಲರೂ ಗಮನಿಸುವಂತೆ ಆಗಿದೆ. ಫೋಟೋ ಜರ್ನಲಿಸ್ಟ್ ಗಳ ಜೊತೆ ಮಾಡಿದ ಹಾಕ್ಯಾಟದಿಂದ ಆತ ಮತ್ತೆ ವಿಶ್ವದ ಗಮನಕ್ಕೆ ಬಂದಿದ್ದಾನೆ. ಆತನ ಫೋಟೋ ತೆಗೆಯುತ್ತಿದ್ದ
ಫೋಟೋ ಜರ್ನಲಿಸ್ಟ್ ನ್ನು ಜೋರಾಗಿ ತನ್ನ ಕಾರಿನ ಡೋರ್ ನಿಂದ ದೂಕಿ ಎಲ್ಲರ ಬಾಯಿಗೆ ಅದರಲ್ಲೂ ಮೀಡಿಯಾ ಬಾಯಿಗೆ ಆಹಾರವಾಗಿದ್ದಾನೆ. ಅವರ ಕಣ್ಣಿಗೆ ಬಿದ್ರೆ ಸುಮ್ಮನೆ ಬಿಡ್ತಾರಾ?

ಇತ್ತೀಚೆಗೆ ಬ್ರೆಜಿಲ್ ನಲ್ಲಿನ ರಿಯೊ ಡಿಜೆನಿರೋ ದಲ್ಲಿ ಇರುವ ವೇಶ್ಯಾಗೃಹ ಒಂದರಲ್ಲಿ ಆತ ವೇಶ್ಯೆ ಸಮೇತ ಸಿಕ್ಕಿ ಬಿದ್ದಿದ್ದ. ಇದು ಅಲ್ಲಿನ ಪೇಪರ್ ಗಳ ಟೀವಿಗಳ ಮುಖ್ಯ ಸುದ್ದಿ ಆಗಿತ್ತು. ಇದರಿಂದ ಆತನ ಅಭಿಮಾನಿಗಳಿಗೆ ಕೋಪ ಉಂಟಾಗಿತ್ತು.
ಈ ಘಟನೆ ಆದ ಬಳಿಕ ರಿಯೊ ಡಿ ಜೆನಿರೋ ದಲ್ಲಿ ವಾಟರ್ ಬಾಟಲಿನಿಂದ ಆತನ ಅಭಿಮಾನಿ ಹೊಡೆದಿದ್ದ. ಇದರಿಂದ ಕುಪಿತನಾಗಿದ್ದ . ಆ ಸಿಟ್ಟಿನಿಂದ ಪಾಪದ ಫೋಟೋ ಜರ್ನಲಿಸ್ಟ್ ಗೆ ಹೀಗೆ ಮಾಡಿದ.. ಉಪ್ಪ ತಿಂದ ಮೇಲೆ ನೀರು ಕುಡಿಲೇ ಬೇಕಲ್ವ?

ವೆಬ್ದುನಿಯಾವನ್ನು ಓದಿ