ಶೀಘ್ರ ಕಲ್ಯಾಣ ಪ್ರಾಪ್ತಿರಸ್ತು; 29ರ ರಮ್ಯಾಗೆ ಹಾರೈಸಿ

PR
SUJENDRA
ಕಳೆದ ಎಂಟು ವರ್ಷಗಳಿಂದ ಕನ್ನಡ ಚಿತ್ರರಂಗದ ಅವಿಭಾಜ್ಯ ಅಂಗವಾಗಿ ಹೋಗಿರುವ ಲಕ್ಕಿ ಸ್ಟಾರ್ ರಮ್ಯಾ ಮದುವೆಯಾಗುತ್ತಿದ್ದಾರೆಯೇ ಎಂದು ಇನ್ನೂ ಅಭಿಮಾನಿಗಳು ಅಚ್ಚರಿಯಿಂದಲೇ ಪ್ರಶ್ನಿಸಿದರೆ, ಅದು ಕೊಂಚ ಅತಿರೇಕದ ಅಭಿಮಾನವೆಂದೇ ಹೇಳಬಹುದೇನೋ? ಖಂಡಿತಕ್ಕೂ ಅವರು ಸದ್ಯಕ್ಕೆ ಮದುವೆಯಾಗುತ್ತಿಲ್ಲ, ಹಾಗೆಂದು ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಅಂತ ಅವರ ಹುಟ್ಟುಹಬ್ಬದ ದಿನ ಹಾರೈಸಿದರೆ ತಪ್ಪೇನಿದೆ?

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹೌದು, ನವೆಂಬರ್ 29ರ ಮಂಗಳವಾರ ನಮ್ಮ ನಿಮ್ಮೆಲ್ಲರ ನೆಚ್ಚಿನ ನಟಿ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನಾ 29ನೇ ಹರೆಯಕ್ಕೆ ಕಾಲಿಡುತ್ತಿದ್ದಾರೆ. ಪ್ರತಿ ವರ್ಷ ತನ್ನ ಹುಟ್ಟುಹಬ್ಬದ ದಿನದಂದು ಅನಾಥ ಮಕ್ಕಳೊಂದಿಗೆ ಮಕ್ಕಳಾಗುವ ರಮ್ಯಾ, ಈ ಬಾರಿ ಪ್ರಿಯಕರ ರಾಫೆಲ್ ತೆಕ್ಕೆಯಲ್ಲಿರುವ ಹೊರತಾಗಿಯೂ ಬರ್ತ್ ಡೇ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ. ಪ್ರತಿ ಹುಟ್ಟುಹಬ್ಬದಂತೆ ಇದೂ ಒಂದು, ಇಪ್ಪತ್ತೆಂಟು ಪ್ಲಸ್ ಒಂದು ಎಂಬಷ್ಟು ಆಲಸ್ಯದಿಂದಲೇ ಮುಂಜಾನೆಗಳನ್ನು ನೋಡುತ್ತಿದ್ದಾರೆ.

ಕನ್ನಡ ಚಿತ್ರರಂಗದ ಜಂಭದ ಕೋಳಿ ಎಂಬ ಹೆಸರು ಪಡೆದುಕೊಂಡರೂ, ಅದನ್ನು ನಟನೆಯಲ್ಲಿ ತೋರಿಸಿದವರಲ್ಲ ನಮ್ಮೀ ರಮ್ಯಾ. ನಟಿಸುವ ವಿಚಾರಕ್ಕೆ ಬಂದಾಗ ಆಕೆ ಸಂಪೂರ್ಣವಾಗಿ ನಿರ್ದೇಶಕರ ಕೈ ಗೊಂಬೆ. ಯಾವತ್ತೂ ಈ ವಿಚಾರದಲ್ಲಿ ನಿರ್ದೇಶಕರ ಜತೆ ಜಗಳಕ್ಕಿಳಿದವರೂ ಅಲ್ಲ. ಹಾಗೆ ನೋಡಿದರೆ, ನಟನೆಗೆ ಭರಪೂರ ಅವಕಾಶಗಳಿವೆ ಎಂದಾಗ ಸಂಭಾವನೆ ವಿಚಾರದಲ್ಲೂ ರಾಜಿ ಮಾಡಿಕೊಂಡದ್ದೂ ಕಣ್ಣ ಮುಂದಿದೆ.

ಇಂತಹ ಹುಡುಗಿಗೆ ಹುಟ್ಟುಹಬ್ಬವೇಕೋ ಬೋರ್ ಹೊಡೆಸುತ್ತಿದೆ. ನವೆಂಬರ್ 29ರಂದು ಇನ್ನೊಂದು ವರ್ಷ ಹಳಬಳಾಗುತ್ತಿದ್ದೇನೆ, ಒಂದು ವರ್ಷ ಜಾಸ್ತಿಯಾಗುತ್ತಿದೆ, ಉಸ್ಸಪ್ಪಾ ಅಂದಿದ್ದಾರೆ. ರಮ್ಯಾಗೆ ಈಗೀಗ ಹುಟ್ಟುಹಬ್ಬಗಳು ತೀರಾ ಸಂಭ್ರಮಿಸಬೇಕು ಎಂಬ ಭಾವನೆಗಳನ್ನು ಹುಟ್ಟಿಸುತ್ತಿಲ್ಲ. ಬರ್ತ್ ಡೇ ದಿನಕ್ಕಾಗಿ ಕಾಯಬೇಕೆನ್ನುವ ತಪವೂ ಇಲ್ಲ. ಅದು ಎಲ್ಲಿಯವರೆಗೆ ಎಂದರೆ, ಹುಟ್ಟುಹಬ್ಬದ ದಿನದಂದು ಗಡದ್ದಾಗಿ ನಿದ್ದೆ ಮಾಡುವ ಆಸೆ ಬಂದಿದೆಯಂತೆ.

ಆದರೂ ಈ 365 ದಿನಗಳಲ್ಲಿ ಕಳೆದುಕೊಂಡದ್ದು, ಪಡೆದುಕೊಂಡದ್ದನ್ನು ರಮ್ಯಾ ಮರೆತಿಲ್ಲ. ಇಡೀ ವರ್ಷ ನನಗೆ ಮಂಗಲಕರವಾಗಿತ್ತು ಅನ್ನೋದನ್ನು ನೆನಪಿಸಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ, ಇದಕ್ಕೆಲ್ಲ ನೀವೇ ಕಾರಣ ಅಂತ ಅಭಿಮಾನಿಗಳನ್ನು ಪುಳಕಗೊಳಿಸಿದ್ದಾರೆ. ತಾನು ಯಾವತ್ತೂ ನಿಮಗೆ ಋಣಿ ಎಂದಿದ್ದಾರೆ. ಬರ್ತ್ ಡೇ ದಿನದಂದು ಸಂಭ್ರಮಿಸಿ ಎಂದು ಕರೆ ನೀಡಿದ್ದಾರೆ.

ಅಭಿಮಾನಿಗಳಿಗೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ತಡ ಯಾಕೆ? ಹ್ಯಾಪಿ ಬರ್ತ್ ಡೇ ರಮ್ಯಾ ಎಂದು ಹಾರೈಸಿ ಬಿಡಿ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ