ಶುಭ ಪೂಂಜಾ-ಪ್ರಶಾಂತ್ ಈಗ ಚಿರಾಯುಗಳಾಗಿದ್ದಾರೆ!

ಬುಧವಾರ, 26 ಫೆಬ್ರವರಿ 2014 (10:32 IST)
PR
ವಿವಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಚಿರಾಯು ಚಿತ್ರದಲ್ಲಿ ಸೆಕ್ಸಿ ಶುಭಾ ಪೂಂಜಾ ಮತ್ತು ಒರತ ಐ ಲವ್ ಯು ಚಿತ್ರ ಖ್ಯಾತಿಯ ಪ್ರಶಾಂತ್ ನಟಿಸಿದ್ದಾರೆ. ಇದರ ಚಿತ್ರೀಕರಣ ಪೂರ್ಣವಾಗಿದೆ. ಬೆಂಗಳೂರು, ಮಂಗಳೂರು, ಹೊರನಾಡು, ಕಳಸ, ಸಕಲೇಶಪುರ ಮುಂತಾದ ಕಡೆ ಚಿತ್ರಕ್ಕೆ ನಲವತ್ತು ದಿನಗಳ ಚಿತ್ರೀಕರಣ ಮಾಡಲಾಗಿದೆ. ಬಹಳ ದಿನಗಳ ಬಳಿಕ ಪ್ರಶಾಂತ್ ಚಿತ್ರ ರಂಗಕ್ಕೆ ಹಿಂತಿರುಗಿದ್ದಾರೆ. ಅವರು ಮತ್ತೆ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಗಿಮಿಕ್ ಮಾಡ ಬೇಕಿದೆ.

ಅದಕ್ಕೆ ಪೂರಕವಾದ ಮಸಾಲೆಗಳನ್ನು ಚಿರಾಯು ಚಿತ್ರದಲ್ಲಿ ತುಂಬಲಾಗಿದೆ ಎನ್ನುವ ಸುದ್ದಿ ಗಾಂಧಿ ನಗರದಲ್ಲಿ ಹರಡಿದೆ. ನಿಟೆಕ್ ಸೂರಿ ಛಾಯಾಗ್ರಾಹಕರಾಗಿರುವ 'ಚಿರಾಯು ಚಿತ್ರಕ್ಕೆ ಜಿ.ಆರ್.ಶಂಕರ್ ಸಂಗೀತ ನೀಡಿದ್ದಾರೆ. ಜಯಂತ ಕಾಯ್ಕಿಣಿ, ಕೆ.ಕಲ್ಯಾಣ್, ಹೇಮಂತ್, ಜಿ.ಆರ್.ಶಂಕರ್ ಹಾಗೂ ಶಿವನಂಜೇಗೌಡ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

PR
ನಾಗೇಂದ್ರ ಅರಸ್ ಸಂಕಲನ, ಹೈಟ್ ಮಂಜು, ಆನಂದ್, ಅರವಿಂದ್ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್, ಥ್ರಿಲ್ಲರ್ ಮಂಜು, ನಂಜುಂಡಿ ನಾಗರಾಜ್ ಸಾಹಸ ನಿರ್ದೇಶನ ಮಾಡಿದ್ದಾರೆ.

'ಒರಟ ಐ ಲವ್ ಯು ಚಿತ್ರದ ಮೂಲಕ ಖ್ಯಾತರಾಗಿರುವ ಪ್ರಶಾಂತ್ ಈ ಚಿತ್ರದ ನಾಯಕ ಮತ್ತು ನಿರ್ಮಾಪಕರಾಗಿದ್ದಾರೆ.ಅಲ್ಲದೆ 'ಒರಟ ಪ್ರಶಾಂತ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ. ಶುಭಾಪುಂಜಾ, ಅವಿನಾಶ್, ಮುನಿ, ಪವಿತ್ರಲೋಕೇಶ್, ರಾಮಕೃಷ್ಣ, ಪದ್ಮವಾಸಂತಿ, ನವೀನ್ ಕೃಷ್ಣ, ಮಾನಸಿ, ಕೋಟೆ ಪ್ರಭಾಕರ್, ಓಂಪ್ರಕಾಶ್ ರಾವ್, ಹೊನವಳ್ಳಿ ಕೃಷ್ಣ, ಮಮತಾ ರಾವುತ್ ಪ್ರಶಾಂತ್ ಜೊತೆ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ