ಸಿಲ್ಕ್ ಸಕತ್ ಹಾಟ್ ಮಗಾ ಚಿತ್ರ ಒಂದೇ ವಾರದಲ್ಲಿ ಎತ್ತಂಗಡಿ

ಗುರುವಾರ, 3 ಏಪ್ರಿಲ್ 2014 (16:45 IST)
ಮೈಸೂರು: ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಸಿಲ್ಕ್ ಚಿತ್ರ ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಒಂದು ವಾರದಲ್ಲೇ ಎತ್ತಂಗಡಿಯಾಗಿದೆ. ಸಿಲ್ಕ್ ಜಾಗದಲ್ಲಿ ಚೆನ್ನೈ ಎಕ್ಸ್‌ಪ್ರೆಸ್ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಈ ಕುರಿತು ಸಿಲ್ಕ್ ಚಿತ್ರತಂಡ ಥಿಯೇಟರ್ ಎದುರು ಪ್ರತಿಭಟನೆ ನಡೆಸಿತು. ತಂಡದಲ್ಲಿ ನಾಯಕನಟ ಅಕ್ಷಯ್ ಅವರು ಸೇರಿದ್ದರು.

ಸಿಲ್ಕ್ ಚಿತ್ರದಲ್ಲಿ ಅಶ್ಲೀಲ ದೃಶ್ಯಗಳಿದ್ದು, ಸಮಾಜದ ಸ್ವಾಸ್ಥ್ಯ ಕೆಡುವುದರಿಂದ ಈ ಚಿತ್ರವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಕೆಲವು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಸಿಲ್ಕ್ ಸಕತ್ ಹಾಟ್ ಮಗಾ ಚಿತ್ರ ಪ್ರದರ್ಶನಕ್ಕೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ್ ಪಾಟೀಲ್ ಬುಧವಾರ ಹೇಳಿಕೆ ನೀಡಿದ್ದರು.

ಸೆಪ್ಟೆಂಬರ್ 10ರವರೆಗೆ ಚಿತ್ರಪ್ರದರ್ಶನಕ್ಕೆ ಮಧ್ಯಂತರ ತಡೆ ನೀಡಿರುವುದಾಗಿ ಅವರು ಹೇಳಿದ್ದರು. ಸಿಲ್ಕ್ ಚಿತ್ರದಲ್ಲಿ ಪಾಕ್ ಮೂಲದ ವೀಣಾ ಮಲ್ಲಿಕ್ ಅಭಿನಯಿಸಿದ್ದನ್ನು ಕೆಲವರು ಪ್ರತಿಭಟಿಸಿದ್ದರು. ಸಿಲ್ಕ್ ಚಿತ್ರದ ಪ್ರದರ್ಶನ ನಿಲ್ಲಿಸಿರುವ ಕುರಿತು ಚಿತ್ರತಂಡವನ್ನು ಪ್ರಶ್ನಿಸಿದಾಗ, ನ್ಯಾಯಾಲಯ ಚಿತ್ರದ ಪೋಸ್ಟರ್ ಬ್ಯಾನ್ ಮಾಡಬೇಕೆಂದು ಹೇಳಿತ್ತು. ಇದನ್ನೇ ಅಪಾರ್ಥ ಮಾಡಿಕೊಂಡು ಇಡೀ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಕನ್ನಡನಾಡಿನಲ್ಲಿ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ಸಿಗದಿದ್ದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ