ಸಿಲ್ಕ್ ಸಖತ್ ಹಾಟ್ ಮಗಾ ನಾಯಕಿ ವೀಣಾ ಮಲಿಕ್‌ಗೆ ಗಾಯ

ಗುರುವಾರ, 3 ಏಪ್ರಿಲ್ 2014 (16:02 IST)
ಶೂಟಿಂಗ್ ವೇಳೆ ಗಾಯವಾಗುವುದರಲ್ಲಿ ಹೊಸತೇನಿಲ್ಲ. ಆದರೆ ಈ ಬಾರಿ ಗಾಯವಾಗಿರುವುದು ಬಾಲಿವುಡ್ ನಟಿ ವೀಣಾ ಮಲ್ಲಿಕ್‌ಗೆ . ಸಿಲ್ಕ್ ಸಖತ್ ಹಾಟ್ ಮಗಾ ಚಿತ್ರದ ಚಿತ್ರೀಕರಣದ ವೇಳೆ ವೀಣಾ ಕಾಲಿಗೆ ಗಾಯ ಮಾಡಿಕೊಂಡಿದ್ದಾಳೆ.

ಚಿತ್ರದ ಕುರಿತಾದ ಆಕೆಯ ಶ್ರದ್ಧೆ ಈ ಅವಘಡಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಥೈಲಾಂಡ್‌ನಲ್ಲಿ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಹಾಡೊಂದರ ಚಿತ್ರೀಕರಣದ ವೇಳೆ ಆಕೆಯ ಕಾಲಿನ ಉಗುರು ನೆಲಕ್ಕೆ ತಾಗಿದ್ದರಿಂದ ಅದು ತುಂಡಾಗಿ ರಕ್ತ ಒಸರಲಾರಂಭಿಸಿತು. ತಕ್ಷಣವೇ ವೈದ್ಯರನ್ನು ಕರೆಯಿಸಲಾಯಿತು ಹಾಗೂ ಕಾಲಿಗೆ ಬ್ಯಾಂಡೇಜ್ ಹಾಕಲಾಯಿತು. ಗಾಯವಾದ ಕಾರಣಕ್ಕೆ ಶೂಟಿಂಗ್ ಕೆಲ ಗಂಟೆಗಳ ಕಾಲ ಮುಂದೂಡಲ್ಪಟ್ಟಿತು.

ಈ ಬಗ್ಗೆ ಮಾತನಾಡಿದ ವೀಣಾ ಗಾಯವಾಗುವುದು ನನಗೆ ಹೊಸತೇನಲ್ಲ. ಆದರೆ ನಾವಿಲ್ಲಿ ರೊಮ್ಯಾಂಟಿಕ್ ಹಾಡೊಂದರ ಚಿತ್ರೀಕರಣ ನಡೆಸಿದ್ದೇವೆ. ಹಾಡಿಗೆ ನಿಜವಾದ ಫೀಲ್ ಬೇಕಾದ್ದರಿಂದ ನೋವಿನ ಕಾಲು ಇಟ್ಟುಕೊಂಡು ನಟಿಸಲಾಗುತ್ತಿಲ್ಲ. ರೊಮ್ಯಾಂಟಿಕ್ ಭಾವವನ್ನು ನಾಟಕೀಯವಾಗಿ ಕೊಟ್ಟರೆ ನಾನು ಪಾತ್ರಕ್ಕೆ ನ್ಯಾಯ ಒದಗಿಸಿದಂತಾಗುವುದಿಲ್ಲ. ಈ ಬಗ್ಗೆ ನನಗೆ ನೋವಿದೆ ಎಂದಿದ್ದಾರೆ ವೀಣಾ. ಥೈಲ್ಯಾಂಡ್ ಅತಿ ಸುಂದರ ದೇಶವಾಗಿದ್ದು ನನಗೆ ಬಹಳ ಇಷ್ಟವಾಯಿತು ಎಂದೂ ಅವರು ಹೇಳಿದ್ದಾರೆ.

ಈ ಚಿತ್ರದ ಬಳಿಕ ವೀಣಾ ಬಾಲಿವುಡ್‌ನ ಸತೀಶ್ ರೆಡ್ಡಿ ನಿರ್ಮಾಣದ ದಿ ಸಿಟಿ ದಟ್ ನೆವರ್ ಸ್ಲೀಪ್ಸ್ ಚಿತ್ರದಲ್ಲಿ ನಟಿಸಲಿದ್ದಾರಂತೆ.

ವೆಬ್ದುನಿಯಾವನ್ನು ಓದಿ