ಸುಗ್ನಳ್ಳಿ ಚೊಚ್ಚಲ ಚಿತ್ರ ಹೋಳಿ

ಸೋಮವಾರ, 19 ಜನವರಿ 2009 (16:01 IST)
PTI
ನಾನು ಇದುವರೆಗೂ ರೀಮೇಕ್ ಚಿತ್ರ ಮಾಡಿಲ್ಲ. ಈಗಾಗಲೇ 45ಕ್ಕೂ ಹೆಚ್ಚು ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಪ್ರೇಕ್ಷಕರಿಗೆ ಹೊಸ ರೀತಿಯ ಅನುಭವ ನೀಡಬೇಕೆನ್ನುವ ಉದ್ದೇಶದೊಂದಿಗೆ ಉತ್ತಮ ಚಿತ್ರಕಥೆ ಸಿದ್ಧಪಡಿಸಿ ಚಿತ್ರ ಮಾಡುತ್ತಿದ್ದೇನೆ ಎಂದರು ಹೋಳಿ ಚಿತ್ರದ ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ.

ಹೋಳಿ ಶಂಕರಲಿಂಗ ಸುಗ್ನಳ್ಳಿ ಅವರ ಸ್ವತಂತ್ರ ನಿರ್ದೇಶನದ ಚೊಚ್ಚಲ ಚಿತ್ರ. ಸಾಂಸ್ಕೃತಿಕ ಹಬ್ಬ ಹೋಳಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಅವರಿಲ್ಲಿ ಪ್ರೇಮಕಥೆ ಹೆಣೆದಿದ್ದಾರೆ.

ಸಂತೋಷದಿಂದ ಒಬ್ಬರಿಗೊಬ್ಬರು ಬಣ್ಣಗಳನ್ನು ಎರಚಿಕೊಂಡು ಹೋಳಿ ಹಬ್ಬ ಆಚರಿಸುತ್ತೇವೆ. ಆದರೆ ಈ ಹಬ್ಬದ ಹಿನ್ನೆಲೆಯಲ್ಲಿ ಒಂದು ದುರಂತ ಕಥೆಯಿದೆ. ಇಬ್ಬರು ಪ್ರೇಮಿಗಳ ದುರಂತ ಅಂತ್ಯವೇ ಹೋಳಿ ಆಚರಣೆಗೆ ನಾಂದಿಯಾಯ್ತು ಎನ್ನುವ ಅಂಶ ಎಷ್ಟೋ ಜನರಿಗೆ ತಿಳಿದಿಲ್ಲ ಎಂದು ಹೋಳಿ ಹಿನ್ನೆಲೆಯನ್ನು ವಿವರಿಸುತ್ತಾರೆ.

ಪಾಶ್ಚಾತ್ಯ ಸಂಸ್ಕೃತಿಯನ್ನು ನೋಡಿ ಬೇಸತ್ತಿರುವ ಪ್ರೇಕ್ಷಕರಿಗೆ ಹೋಳಿ ತಣ್ಣನೆಯ ಅನುಭವ ನೀಡಲಿದೆ. ಚಿತ್ರಕ್ಕೆ ಐತಿಹಾಸಿಕ ಸ್ಪರ್ಶ ನೀಡುವ ಉದ್ದೇಶದಿಂದ ಹಂಪೆ ಹಾಗೂ ಉತ್ತರ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕರಾಗಿ ವೆಂಕಟೇಶ್ ಪ್ರಸಾದ್ ಹಾಗೂ ನಾಯಕಿಯಾಗಿ ರಾಗಿಣಿ ನಟಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ