ಸ್ಮಗ್ಲರ್ ಚಿತ್ರಕ್ಕಾಗಿ ತೂಕ ಇಳಿಸಿಕೊಂಡ ಪ್ರಿಯಾ ಹಾಸನ್

ಶುಕ್ರವಾರ, 12 ಜುಲೈ 2013 (16:09 IST)
IFM
IFM
ಭಿನ್ನ ಪಾತ್ರ ಹಾಗೂ ಶೈಲಿಯಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ಪ್ರಿಯಾ ಹಾಸನ್. ನಾಯಕಿಯರೆಂದರೆ ಕೇವಲ ಗ್ಲಾಮರ್ಗಷ್ಟೇ ಸೀಮಿತ ಎಂಬ ಭಾವನೆಯನ್ನು ಅಳಿಸಿ ಹಾಕಿದ ದಿಟ್ಟ ಕಲಾವಿದೆ. ಮೊದಲ ಚಿತ್ರದಲ್ಲೇ ನಾಯಕಿಯಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಹೆಸರು ಮಾಡಿದವರು.

ಸಿನೆಮಾ ಕಥೆಯಲ್ಲೂ ಅಷ್ಟೇ. ನಾಯಕನನ್ನು ಮೀರಿಸುವ ಪಾತ್ರ ನಾಯಕಿಯದ್ದು. ಎಲ್ಲಾ ಕೋನಗಳಿಂದಲೂ ಸೈ ಎನ್ನುವಂತಹ ಅಭಿನಯ ನೀಡಿದವರು. ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡು ಭರ್ಜರಿ ಯಶಸ್ಸು ಕಂಡವರು. ಸದ್ಯ ಅವರು ಮತ್ತೆ ಸುದ್ದಿಯಲ್ಲಿರುವುದು ಹತ್ತು ಕೇಜಿ ತೂಕ ಕಳೆದುಕೊಂಡಿರುವ ಕಾರಣಕ್ಕೆ. ಆದರೆ ಪ್ರಿಯಾ ಸ್ಮಗ್ಲರ್ ಚಿತ್ರದ ಐದು ಹಾಡುಗಳಿಗಾಗಿ ತೂಕ ಇಳಿಸಿಕೊಂಡರೂ ಚಿತ್ರಕ್ಕಾಗಿ ಅವರು ಮಾಡಿದ ಪ್ರಯೋಗ ಅಚ್ಚರಿ ಪಡುವಂತದ್ದೇ.

ಚಿತ್ರದಲ್ಲಿ ನಾಯಕ ಹಾಗೂ ನಾಯಕಿಯ ಪಾತ್ರವನ್ನು ಇವರೇ ನಿಭಾಯಿಸಿದ್ದಾರೆ. ಡ್ಯೂಪ್ ಇಲ್ಲದೆ ಐದು ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟಂಟ್ ಮಾಡುವಾಗ ತುಸು ಹೆಚ್ಚಗಾಗಿದ್ದ ದೇಹವನ್ನು ಹಾಡಿಗಾಗಿ ಕರಗಿಸಿಕೊಂಡಿದ್ದಾರೆ. ಬೇರೆ ಸಿನೆಮಾಗಳಲ್ಲಾದರೆ ನಾಯಕ ಸಿಕ್ಸ್ ಪ್ಯಾಕ್ ಹೊಂದಿರುತ್ತಾನೆ, ನಾಯಕಿ ಬಳುಕುವ ಬಳ್ಳಿಯಂತಹ ದೇಹ ಹೊಂದಿರುತ್ತಾಳೆ. ಇಲ್ಲಿ ಈ ಎರಡೂ ಪಾತ್ರಗಳನ್ನು ನಾನೇ ನಿರ್ವಹಿಸಿಕೊಳ್ಳಬೇಕಾಗಿತ್ತು. ಹೀಗಾಗಿ ತೂಕ ಕಳೆದುಕೊಂಡೆ ಎನ್ನುವ ಪ್ರಿಯಾ ಸಣ್ಣಗಾಗಿ ಸೆಟ್‌ಗೆ ಹೋದಾಗ ಯಾರೂ ಅವರನ್ನು ಗುರುತಿಸಲಿಲ್ಲವಂತೆ.

ಚಿತ್ರವನ್ನು ಮೂರು ಭಾಷೆಯಲ್ಲಿ ಬಿಡುಗಡೆ ಮಾಡಬೇಕೆಂಬ ಆಸೆ ಇದೆ ಎಂದಿದ್ದಾರೆ ಪ್ರಿಯಾ. ಐದು ಹಾಡುಗಳ ಚಿತ್ರೀಕರಣಕ್ಕೆ ಬ್ಯಾಂಕಾಕ್, ಮಲೇಶಿಯಾ, ಮಾರಿಷಸ್ಗೆ ಚಿತ್ರತಂಡ ಪ್ರಯಾಣ ಬೆಳೆಸಲಿದೆ.

ವೆಬ್ದುನಿಯಾವನ್ನು ಓದಿ