ಹೆಚ್ಚಿನ ವಿಶ್ರಾಂತಿಗಾಗಿ ಅಂಬರೀಷ್ ಮಲೇಷಿಯಾಕ್ಕೆ ಪಯಣ

ಸೋಮವಾರ, 24 ಮಾರ್ಚ್ 2014 (09:55 IST)
PR
ಡಾ. ಅಂಬರೀಷ್ ಅವರ ಅಭಿಮಾನಿಗಳ ಹಾರೈಕೆ ಮತ್ತು ಪ್ರೀತಿ ಅವರನ್ನು ಕಾಪಾಡಿದೆ.ನಟ -ಸಚಿವ ಡಾ. ಅಂಬರೀಷ್ ಅವರು ಆರೋಗ್ಯ ಈಗ ಸುಸ್ಥಿರವಾಗಿದೆ. ಈಗ ಮಾಮೂಲಿ ಸ್ಥಿತಿಗೆ ಮರಳುತ್ತಿರುವ ಅಂಬಿ ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಸಿಂಗಪೂರ್ ದೇಶದಲ್ಲಿರುವ ಮೌಂಟ್ ಎಲಿಜೆಬೆತ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಅವರ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಿ ವಹಿಸಿ ವೈದ್ಯರು ಅವರನ್ನು ಮತ್ತೆ ಅವರನ್ನು ಅವರ ಅಭಿಮಾನಿಗಳಿಗೆ ಒಪ್ಪಿಸಿದ್ದಾರೆ. ಅಂಬಿ ಅವರನ್ನು ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಅವರು ಈಗ ಅರ್ಜುನ್ ಸರ್ಜಾ ಅವರ ಪುತ್ರಿಯ ಮನೆಯಿಂದ ಬಂಡ ಉಪ್ಪಿಟ್ಟು, ಅಕ್ಕಿರೊಟ್ಟಿ, ಬಿಸಿಬೇಳೆ ಬಾತ್ ಸೇವಿಸಿ ಆರೋಗ್ಯವಾಗಿದ್ದಾರೆ.

PR
ಆದರೆ ಈಗ ಹೇಳ ಹೊರಟಿರುವ ಸಂಗತಿ ಎಂದರೆ ಅಂಬಿ ಅವರ ಆರೋಗ್ಯದ ತಪಾಸಣೆಯನ್ನು ಆಗಾಗ ಮಾಡ ಬೇಕಾದ ಕಾರಣ ತಕ್ಷಣವೇ ಅವರು ಬೆಂಗಳೂರಿಗೆ ಬರುವಂತಿಲ್ಲ. ಆದ ಕಾರಣ ಅವರು ಮಲೇಶಿಯಾ ದೇಶಕ್ಕೆ ಹೋಗುತ್ತಿದ್ದಾರೆ ವಿಶ್ರಾಂತಿ ಪಡೆಯಲು. ಏತನ್ಮಧ್ಯೆ ಚುನಾವಣೆಯ ಸಲುವಾಗಿ ಒಮ್ಮೆ ಬೆಂಗಳೂರಿಗೂ ಬಂದು ಹೋಗುವ ಸಾಧ್ಯತೆ ಇದೆ. ಏಕೆಂದರೆ ಅಂಬರೀಶ್ ಅವರು ನಿರಂತರವಾಗಿ ಎರಡು ವಾರಗಳಾದರೂ ಅಲ್ಲಿ ನೆಲೆಸಿರ ಬೇಕಾಗಿದೆ.

ಅಂಬರೀಷ್ ಅವರ ಮಿತ್ರ ಅಲ್ಲಿನ ಸ್ಥಳೀಯ ರಾಜ ಸಂಪೂರ್ಣವಾಗಿ ಇವರ ಆರೋಗ್ಯದ ಹೊಣೆ ಹೊತ್ತು ಅವರನ್ನು ಮಲೇಶಿಯಾದಲ್ಲಿ ನೆಲೆಸಲು ಅವಕಾಶ ಮಾಡಿದ್ದಾರೆ. ಒಟ್ಟಾರೆ ಅಪಾರ ಅಭಿಮಾನಿಗಳ ಹಾರೈಕೆಯಿಂದ ಡಾ. ಅಂಬರೀಷ್ ಅನಾರೋಗ್ಯವನ್ನು ಗೆದ್ದಿದ್ದಾರೆ. ಅವರು ಬೇಗ ತಾಯ್ನಾಡಿಗೆ ಹಿಂತಿರುಗಿ ಮತ್ತೆ ಅಭಿಮಾನಿಗಳ ಮನ ತಣಿಸಲಿ.

ವೆಬ್ದುನಿಯಾವನ್ನು ಓದಿ