1 ತಿಂಗಳಲ್ಲಿ 14 ಚಿತ್ರ

ಶನಿವಾರ, 31 ಜನವರಿ 2009 (19:26 IST)
2009ರಲ್ಲೂ ಚಿತ್ರರಂಗದಲ್ಲಿ ಭರ್ಜರಿ ಚಿತ್ರಗಳು ತೆರೆ ಕಾಣುತ್ತಿದೆ. ಜನವರಿಯಲ್ಲಿ ಒಟ್ಟು 14 ಚಿತ್ರಗಳು ತೆರೆಕಂಡಿವೆ. ಆದರೆ ಒಂದು ಕಾಲದಲ್ಲಿ 6 ತಿಂಗಳಾದರೂ 15 ಚಿತ್ರಗಳು ಕೂಡಾ ಬಿಡುಗಡೆಯಾಗುತ್ತಿರಲಿಲ್ಲ. ಈ ವಾರ ಮೂರು ಚಿತ್ರಗಳು ಬಿಡುಗಡೆಯಾಗಿವೆ. ಅಂಬಾರಿ, ಮೇಘವೇ ಮೇಘವೇ ಹಾಗೂ ಚಂದ್ರಗಿರಿಯ ರಹಸ್ಯ.

ಮೇಘವೇ ಮೇಘವೇ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ನಂದ ನಂದಿತದ ನಂತರ ಯೋಗೀಶ್ ನಾಯಕನಾಗಿ ನಟಿಸಿದ ಎರಡನೇ ಚಿತ್ರ ಅಂಬಾರಿ ಈ ವಾರ ತೆರೆ ಕಂಡಿದೆ. ಮೇಘವೇ ಮೇಘವೇ ಚಿತ್ರತಂಡ ಕಳೆದ ವರ್ಷ ಹಾರುವ ವಿಮಾನದಲ್ಲಿ ಧ್ವನಿ ಸುರುಳಿ ಬಿಡುಗಡೆ ಮಾಡಿ ಚಿತ್ರತಂಡ ಸುದ್ದಿ ಮಾಡಿತ್ತು. ಆದರೆ ಚಿತ್ರ ಬಿಡುಗಡೆಯಾಗಿದೆ. ಪ್ರೇಕ್ಷಕರು ಥಿಯೇಟರ್‌ನತ್ತ ಧಾವಿಸುತ್ತಿಲ್ಲ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ.

ಜನವರಿಯಲ್ಲಿ ತೆರೆಕಂಡ ಚಿತ್ರಗಳು: ಗುಲಾಮ, ಕೆಂಪ, ಅನು, ಚಿಕ್ಕಪೇಟೆ ಸಾಚಾಗಳು, ಟ್ಯಾಕ್ಸಿ ನಂ. 1, ಸರ್ಕಸ್, ಶಿವಮಣಿ, ಪ್ರಚಂಡರು, ನಂದ, ಜಾಲಿಡೇಸ್, ನನ್ನಮಾತು ಸುಳ್ಳಲ್ಲ, ಅಂಬಾರಿ, ಚಂದ್ರಗಿರಿ ರಹಸ್ಯ ಹಾಗೂ ಮೇಘವೇ ಮೇಘವೇ. ಈ ನಡುವೆ ಜನವರಿಯಲ್ಲಿ ತೆರೆಕಾಣಬೇಕಿದ್ದ ಕೆಲವು ಚಿತ್ರಗಳು ಚಿತ್ರಮಂದಿರ ಸಮಸ್ಯೆಯಿಂದ ಫೆಬ್ರವರಿಯಲ್ಲಿ ತೆರೆಕಾಣುತ್ತಿದೆ. ಅವುಗಳಲ್ಲಿ ನಂಯಜಮಾನ್ರು, ಬಿರುಗಾಳಿ, ವೆಂಕಟ ಇನ್ ಸಂಕಟ, ಐಡ್ಯಾ ಮಾಡ್ಯಾರ ಚಿತ್ರಗಳು ಫೆಬ್ರವರಿಯಲ್ಲಿ ತೆರೆ ಕಾಣುತ್ತಿದೆ.

ವೆಬ್ದುನಿಯಾವನ್ನು ಓದಿ