ಅಂದ ಕೆಡಿಸಿದ ಚರ್ಮರೋಗ ತಜ್ಞರಿಂದ 1 ಕೋಟಿ ರೂ. ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ
ಶನಿವಾರ, 24 ಏಪ್ರಿಲ್ 2021 (10:51 IST)
ಚೆನ್ನೈ : ಸೌಂದರ್ಯ ಚಿಕಿತ್ಸೆಗೆ ಒಳಗಾಗಿ ಮುಖವನ್ನು ಕೆಡಿಸಿಕೊಂಡ ಮಾಡೆಲ್, ನಟಿ ರೈಜಾ ವಿಲ್ಸನ್ ಅವರು ಇದೀಗ ಚರ್ಮರೋಗ ತಜ್ಞರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.
ನಟಿ ರೈಜಾ ವಿಲ್ಸನ್ ಅವರು ಮುಖದ ಚಿಕಿತ್ಸೆಗಾಗಿ ಚರ್ಮರೋಗ ಚಿಕಿತ್ಸಾಲಯೊಂದಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರಿಗೆ ಅಗತ್ಯವಿಲ್ಲದ ಚಿಕಿತ್ಸೆಯೊಂದನ್ನು ಮಾಡಿಕೊಳ್ಳಲು ಒತ್ತಾಯಿಸಿ ಅದರ ಪರಿಣಾಮ ಅವರ ಮುಖ ಊದಿಕೊಂಡು ಕಣ್ಣಿನ ಕೆಳಗೆ ಕಪ್ಪಾಗಿ ತುಂಬಾ ಕೆಟ್ಟದಾಗಿ ಕಾಣಿಸಿದೆ.
ಹೀಗಾಗಿ ಅವರು ಚರ್ಮರೋಗ ತಜ್ಞರನ್ನು ದೂಷಿಸಿ ಅವರಿಂದ 1 ಕೋಟಿ ರೂ. ಪರಿಹಾರ ಕೋರಿ ನಟಿ ಕೋರ್ಟ್ ನ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.