ರಾಮ್ ಗೋಪಾಲ್ ವರ್ಮಾಗೆ 10 ಲಕ್ಷ ರೂ. ದಂಡ ?!

ಬುಧವಾರ, 2 ಸೆಪ್ಟಂಬರ್ 2015 (10:42 IST)
ಥ್ರಿಲ್ಲರ್ ಸಿನಿಮಾಗಳ ಸರದಾರ ರಾಮ್ ಗೋಪಾಲ್ ವರ್ಮಾಗೆ ದೆಹಲಿ ಹೈಕೋರ್ಟ್ 10 ಲಕ್ಷ ರೂಪಾಯಿ ದಂಡ   ವಿಧಿಸಿದೆ. ಅಮಿತಾಬ್ ಬಚ್ಚನ್ ಅಭಿನಯ ಶೋಲೆ ಸಿನಿಮಾವನ್ನು ಕಾಪಿ ರೈಟ್ಸ್ ನಲ್ಲಿದ್ದ ನಿಯಮಗಳನ್ನ ಉಲ್ಲಂಘಿಸಿ ರಿಮೇಕ್ ಮಾಡಿದಕ್ಕಾಗಿ ಈ ದಂಡ ವಿಧಿಸಲಾಗಿದೆ.
1975 ರಲ್ಲಿ ತೆರೆ ಕಂಡ ಬಾಲಿವುಡ್ ನ ಬ್ಲಾಕ್ ಬ್ಲಸ್ಟರ್ ಸಿನಿಮಾ ಶೋಲೆಯನ್ನು ರಾಮ್  ಗೋಪಾಲ ವರ್ಮಾ ಕೀ ಆಗ್ ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಆದ್ರೆ ರಿಮೇಕ್ ಸಿನಿಮಾದಲ್ಲಿ ಶೋಲೆ ಸಿನಿಮಾದಲ್ಲಿದ್ದ  ಗಬ್ಬರ್ ಸಿಂಗ್ ಪಾತ್ರವನ್ನು ದುರ್ಬಳಕೆ ಮಾಡಲಾಗಿದೆ ಅಂತಾ ಶೋಲೆ ಸಿನಿಮಾದ ನಿರ್ಮಾಪಕರಾದ ವಿಜಯ್ ಸಿಪ್ಪಿ ಹಾಗೂ ಜೆ.ಪಿ.ಸಿಪ್ಪಿ ಅವರ ಮೊಮ್ಮಗ ಸಸ್ಚಾ ಸಿಪ್ಪಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ಹೈಕೊರ್ಟ್ ಆರ್ ಜಿವಿ ಪ್ರೊಡಕ್ಷನ್ ಹೌಸ್ ಗೆ ದಂಡ ವಿಧಿಸಿದೆ.
 
ಇನ್ನು ಶೋಲೆ ಸಿನಿಮಾದ ಸಾಹಿತ್ಯ ಹಾಗೂ ಸಂಗೀತವನ್ನು ಸಹ ದುರ್ಬಳಕೆ ಮಾಡಕೊಳ್ಳಲಾಗಿದೆ ಅಂತಾ ಸಸ್ಚಾ ಆರೋಪಿಸಿದ್ದಾರೆ.  ಅಲ್ಲದೇ ಕಾಪಿ ರೈಟ್ಸ್ ನ ಎಲ್ಲಾ ನಿಯಮಗಳನ್ನು ಆರ್ ಜಿವಿ ಉಲ್ಲಂಘಿಸಿದ್ದಾರೆ ಅಂತಾ ಸಸ್ಚಾ ಸಿಪ್ಪಿ ತಿಳಿಸಿದ್ದಾರೆ.
ಬಿಡುಗಡೆಯಾದ ಮೊದಲ ವಾರದಲ್ಲಿ ಫ್ಯಾಂಟಮ್ 33.18 ಕೋಟಿ ಗಳಿಕೆ ಬಿಡುಗಡೆಗೂ ಮುನ್ನವೇ ಸದ್ದು ಮಾಡಿದ್ದ ಫ್ಯಾಂಟಮ್ ಬಿಡುಗಡೆಯ ಬಳಿಕವೂ ಸುದ್ದಿ ಮಾಡುತ್ತಲೇ ಇದೆ. ಬಿಡುಗಡೆಯಾದ ಮೊದಲ ವಾರದಲ್ಲೇ ಈ ಸಿನಿಮಾ ಬರೋಬ್ಬರಿ 33.18 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
 
ಆಗಸ್ಟ್ 28 ರಂದು ರಿಲೀಸ್ ಆದ ಈ ಸಿನಿಮಾ ಮೊದಲ ದಿನ 8.46 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.  ರಕ್ಷಾ ಬಂಧನದ ದಿನ ಬರೋಬ್ಬರಿ 12.78 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ಮೂಲಕ ಮೊದಲ ವಾರವೇ ಫ್ಯಾಂಟಮ್ ಸಿನಿಮಾ ನಿರ್ಮಾಪಕರಿಗೆ ಉತ್ತಮ ಗಳಿಕೆ ತಂದು ಕೊಟ್ಟಿದೆ.
 
ಸಿನಿಮಾ ಒಟ್ಟು 2600 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದು, ವಿದೇಶಗಳಲ್ಲೂ ಸಿನಿಮಾಗೆ ಉತ್ತಮ ಒಪನಿಂಗ್ ಸಿಕ್ಕಿದೆ. ಕಲೆಕ್ಷನ್ ನಲ್ಲಿ ಮುಂದೆ ಇದೇ ನಾಗಾಲೋಟವನ್ನು ಮುಂದುವರೆಸಿದ್ರೆ, ಚಿತ್ರ ಬಾಕ್ಸಾಫೀಸ್ ನಲ್ಲಿ ಇನ್ನಷ್ಟು ಧೂಳೆಬ್ಬಿಸೋದು ಖಚಿತ.

ವೆಬ್ದುನಿಯಾವನ್ನು ಓದಿ