'ತನು ವೆಡ್ಸ್ ಮನು ರಿಟರ್ನ್ಸ್'ಯಿಂದ 150 ಕೋಟಿ ಗಳಿಕೆ

ಶನಿವಾರ, 4 ಜುಲೈ 2015 (10:11 IST)
ಆರ್ ಮಾಧವನ್ ಹಾಗೂ ಕಂಗನ ರನೌಟ್ ಅಭಿನಯದ ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರ ಈಗ 150  ಕೋಟಿ ಕ್ಲಬ್ ಸೇರಿದೆ. ಈ ಸುದ್ದಿಯನ್ನು ಟ್ರೇಡ್ ತಜ್ಞರು ತಿಳಿಸಿದ್ದಾರೆ. 2015  ರಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಬಾಲಿವುಡ್ ಚಿತ್ರ ತನು ವೆಡ್ಸ್ ಮನು ರಿಟರ್ನ್ಸ್  ಈಗ ಹೆಚ್ಚಿನ ಗಳಿಕೆ ಮಾಡಿದ ಅಗ್ಗಳಿಕೆ ಪಡೆದಿದೆ. 
ರೋಮಾಂಟಿಕ್  ಹಾಸ್ಯಪ್ರಧಾನ ಅಂಶಗಳನ್ನು ಹೊಂದಿರುವ ಈ ಚಿತ್ರವು 150.03 ಕೋಟಿಗಳಷ್ಟು ಗಳಿಕೆ ಮಾಡಿದೆ ಎನ್ನುವ ಸಂಗತಿಯನ್ನು ಟ್ರೇಡ್ ಅನಲಿಸ್ಟ್ ತರುಣ್ ಆದರ್ಶ್ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. 
 
ಅಲ್ಲದೆ ಆನಂದ್ ಎಲ್ ರಾಯ್ ನಿರ್ದೇಶನ ಈ ಚಿತ್ರ ಉತ್ತಮ ಗಳಿಕೆ ಮಾಡಿರುವ ಬಗ್ಗೆ ಮತ್ತೊಂದು ಸಮೀಕ್ಷೆ ಸಹ ಕನ್ಫರ್ಮ್ ಮಾಡಿದೆ. ಮೇ 22ರಂದು ಬಿಡುಗಡೆಯಾದ ಈ ಚಿತ್ರ 2011ರಲ್ಲಿ ಬಿಡುಗಡೆ ಆದ ತನು ವೆಡ್ಸ್ ಮನು ಚಿತ್ರದ ಮುಂದಿನ ಭಾಗವಾಗಿದೆ. ಇದರಲ್ಲಿ ದೀಪಕ್ ದೊಬ್ರಿಯಲ್, ಜಮ್ಮಿ ಶೈರ್ಗಿಲ್, ಸ್ವರ ಭಾಸ್ಕರ್ ಮುಂತಾದವರು ಅಭಿನಯಿಸಿದ್ದು, ಎಲ್ಲಾ ಪಾತ್ರಗಳು ಮೆಚ್ಚುಗೆ ಗಳಿಸಿವೆ.

ವೆಬ್ದುನಿಯಾವನ್ನು ಓದಿ