2010 -11 ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಮಿಂಚಿದ ರಮ್ಯಾ, ಪುನೀತ್

ಶುಕ್ರವಾರ, 25 ಅಕ್ಟೋಬರ್ 2013 (17:31 IST)
PR
PR
2010 - 11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಇದೀಗ ಪ್ರಕಟಗೊಂಡಿದೆ. ಜಾಕಿ ಚಿತ್ರದ ನಟನೆಗಾಗಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ರೆ, ನಟಿ ರಮ್ಯಾ "ಸಂಜು ವೆಡ್ಸ್‌ ಗೀತಾ" ಸಿನೆಮಾಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಕೆ.ಶಿವರುದ್ರಯ್ಯ ನಿರ್ದೇಶನದ 'ಮಾಗಿಯ ಕಾಲ' ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಅಗ್ನಿ ಶ್ರೀಧರ್ ನಿರ್ದೇಶನದ 'ತಮಸ್ಸು' ಹಾಗೂ ಕೂಡ್ಲು ರಾಮಕೃಷ್ಣ ನಿರ್ದೇಶನದ 'ಮಾನಸ' ಚಿತ್ರಗಳು ಕ್ರಮವಾಗಿ ಅತ್ಯುತ್ತಮ ದ್ವೀತಿಯ ಚಿತ್ರ ಮತ್ತು ಅತ್ಯುತ್ತಮ ತೃತೀಯ ಚಿತ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ. ಅಗ್ನಿ ಶ್ರೀಧರ‍್ ಅವರ ತಮಸ್ಸು ಚಿತ್ರಕ್ಕೆ ಒಟ್ಟು ಮೂರು ಪ್ರಶಸ್ತಿಗಳು ದೊರೆತಿವೆ. ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ದ್ವಿತೀಯ ಚಿತ್ರ ಮತ್ತು ಅತ್ಯುತ್ತಮ ಪೋಷಕ ನಟಿಯ ಪ್ರಶಸ್ತಿಗಳನ್ನು ತಮಸ್ಸು ಚಿತ್ರತಂಡದ ಸದದ್ಯರೇ ಗೆದ್ದುಕೊಂಡಿದ್ದು ವಿಶೇಷ.

ಪ್ರಶಸ್ತಿಯ ವಿವರ:

ಅತ್ಯುತ್ತಮ ನಟ - ಪುನೀತ್‌ ರಾಜ್‌ ಕುಮಾರ್‌ (ಜಾಕಿ)
ಅತ್ಯುತ್ತಮ ನಟಿ - ರಮ್ಯಾ (ಸಂಜು ವೆಡ್ಸ್ ಗೀತಾ)
ಅತ್ಯುತ್ತಮ ಚಿತ್ರ - ಮಾಗಿಯ ಕಾಲ, (ನಿರ್ದೇಶಕ ಕೆ.ಶಿವರುದ್ರಯ್ಯ)
ಅತ್ಯುತ್ತಮ ದ್ವಿತೀಯ ಚಿತ್ರ- ತಮಸ್ಸು, (ನಿರ್ದೇಶಕ ಅಗ್ನಿ ಶ್ರೀಧರ್)
ಅತ್ಯುತ್ತಮ ತೃತೀಯ ಚಿತ್ರ - ಮಾನಸ, (ನಿರ್ದೇಶಕ ಕೂಡ್ಲು ರಾಮಕೃಷ್ಣ)
ಅತ್ಯುತ್ತಮ ಮಕ್ಕಳ ಚಿತ್ರ- ಒಂದೂರಲ್ಲಿ
ಅತ್ಯುತ್ತಮ ಸಾಮಾಜಿಕ ಚಿತ್ರ - ಬ್ಯಾರಿ
ಅತ್ಯುತ್ತಮ ಪೋಷಕ ನಟಿ- ಹರ್ಷಿಕಾ ಪೂಣಚ್ಚ, (ತಮಸ್ಸು)
ಅತ್ಯುತ್ತಮ ಗೀತ ರಚನೆಕಾರ- ಎ.ಬಂಗಾರ
ಅತ್ಯುತ್ತಮ ಹಿನ್ನೆಲೆ ಗಾಯಕ- ರವೀಂದ್ರ
ಅತ್ಯುತ್ತಮ ಹಿನ್ನೆಲೆ ಗಾಯಕಿ- ರಕ್ಷಾ ಪ್ರಿಯರಾಂ
ಅತ್ಯುತ್ತಮ ಚಿತ್ರಕತೆ - ಅಗ್ನಿ ಶ್ರೀಧರ, (ತಮಸ್ಸು)
ರಾಜ್‌ಕುಮಾರ್ ಪ್ರಶಸ್ತಿ- ಶಿವರಾಂ

ವೆಬ್ದುನಿಯಾವನ್ನು ಓದಿ