2011ಸ್ಯಾಂಡಲ್‌ವುಡ್ ರೌಂಡಪ್; ವಿವಾದಗಳಿಗೆ ಅಂತ್ಯ ಎಂದು?

- ಇಳಯರಾಜ ಸುಬ್ಬಯ್ಯ ಮಡಿಕೇರಿ

PR


2011ರಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ಅತ್ಯುತ್ತಮ ಚಿತ್ರಗಳನ್ನು ನೀಡುವುದರೊಂದಿಗೆ ಚಿತ್ರಪ್ರೇಮಿಗಳನ್ನು ರಂಜಿಸಿದ್ದಾರಾದಾರೂ, ಅವರ ಚಿತ್ರಗಳಿಗಿಂತ ವಿಭಿನ್ನ, ವಿಚಿತ್ರ, ನೈಜತೆ ಎಲ್ಲವೂ ವ್ಯಕ್ತವಾಗಿದ್ದು ನಟ ನಟಿಯರ ವಿವಾದಗಳಿಂದ. ಅಂತಹಾ ಮರೆಯಲಾರದ ವಿವಾದಗಳ ಸಂಕ್ಷಿಪ್ತ ವಿವರ ಇಲ್ಲಿದೆ. ಸುಮ್ನೆ ನೋಡಿ ಇನ್ನೊಮ್ಮೆ ಹೀಗಾಗದಿರಲಿ ಎಂದು ಸಲಹೆ ನೀಡಿ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸ್ಟಾರ್ ನಟರು ಎಂದ ಮಾತ್ರಕ್ಕೆ ಅವರು ನಿಮ್ಮಷ್ಟು ಪ್ರಜ್ಞಾವಂತರಾಗಿರಬೇಕು ಎಂದೇನು ಇಲ್ಲವಲ್ಲ. ಒಮ್ಮೆಲೇ ಸ್ಟಾರ್ ಪಟ್ಟ ಬಂದಂತೆ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದೆಲ್ಲಾ ಉಬ್ಬಿಹೋಗಿ ಸುಮ್ನೆ ಸುಮ್ನೆ ಎಡವಟ್ಟು ಮಾಡಿಕೊಳ್ತಾರೆ.

ಹಾಗಾಗಿ ಇನ್ನೊಮ್ಮೆ ಹೀಗೆಲ್ಲಾ ಮಾಡಿಕೊಂಡು ನಿಮ್ಮ ಮರ್ಯಾದೆಯನ್ನ ನೀವೇ ಬೀದಿಗೆ ತಂದು ಹಾಳು ಮಾಡಿಕೊಳ್ಳಬೇಡಿ ಎಂದು ಪ್ರೀತಿಯಿಂದ, ಅಭಿಮಾನದಿಂದ ನಿಮ್ಮ ಮಕ್ಕಳಿಗೆ ಹೇಳುವಂತೆ ಸ್ವಲ್ಪ ಬುದ್ಧಿ ಹೇಳಿ. ಕಳೆದುಕೊಳ್ಳುವಂತದ್ದೇನು ಇಲ್ಲವಲ್ಲಾ.

2011ರಲ್ಲಿ ಮೊದಲಿಗೆ ಎಡವಟ್ಟು ಮಾಡಿಕೊಂಡಿದ್ದು ನಟಿ ಯಮುನಾ. ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿಕೊಂಡಿದ್ದ ಯಮುನಾ, ಪ್ರತಿಷ್ಟಿತ ಲಾಡ್ಜ್‌ವೊಂದರಲ್ಲಿ ಇತರ ಎಂಟು ಮಂದಿಯೊಂದಿಗೆ ಪೊಲೀಸರ ಬಲೆಗೆ ಬಿದ್ದಿದ್ದರು. ಅವಕಾಶಗಳು ಬಂದಾಗ ಹಣ ಕೂಡ ಹರಿದು ಬರುತ್ತದೆ. ಹಣ ಬಂದಂತೆ ಹಳೆಯದನ್ನು ಮರೆತು ತಮ್ಮ ಜೀವನ ಮಟ್ಟವನ್ನು ಉನ್ನತ ಸ್ಥರಕ್ಕೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೈಫೈ ಶೋಕಿ ಶುರುವಿಟ್ಟುಕೊಳ್ಳುತ್ತಾರೆ.

ಒಮ್ಮೆಲೇ ಅವಕಾಶಗಳು ನಿಂತಾಗ ದಿಕ್ಕುತೋಚಗೆ ದಾರಿ ತಪ್ಪಿ ಅಚಾನಕ್ಕಾಗಿ ಪೊಲೀಸರ ಬಲೆಗೆ ಬೀಳುತ್ತಾರೆ. ಹಾಗೂ ಪೊಲೀಸರಿಗೆ ಮಾಹಿತಿ ನೀಡುವವರು ಕೂಡ ಮಹಾನ್ ಸಾಚಾಗಳಲ್ಲ ಎಂಬುದು ಕೂಡ ಗಮನಾರ್ಹ.

ಎರಡನೆಯದಾಗಿ ನಟಿ ರಮ್ಯಾ ಅವರದ್ದು. ನಗು ನಗುತ್ತಲೇ ಮಾತನಾಡುತ್ತಾ ಒಮ್ಮೆಲೇ ಸಿಟ್ಟು ಮಾಡಿಕೊಳ್ಳುವ ನಟಿ ರಮ್ಯಾಗೆ ವಿವಾದಗಳು ಹೊಸದೇನಲ್ಲ. ಆದರೆ ಕಣ್ಣೀರು ಹಾಕುವಷ್ಟರ ಮಟ್ಟಿಗೆ ಹೋಗಬಾರದಿತ್ತು. ದಂಡಂ ದಶಗುಣಂ ಚಿತ್ರದ ಆಡಿಯೊ ರಿಲೀಸ್ ಕಾರ್ಯಕ್ರಮಕ್ಕೆ ಬರದೆ ಹೋಗಿದ್ದು ವಿವಾದಕ್ಕೆ ಕಾರಣವಾಗಿತ್ತು.

ಬೇರೆ ನಟಿಯರೆಲ್ಲಾ ಬರುತ್ತಾರೆ ಇವರೇನು ಮಹಾ ಎಂಬಂತೆ ನಿರ್ಮಾಪಕ ಎ.ಗಣೇಶ್ ಕಿವಿಗೆ ಯಾರೋ ಹುಳ ಬಿಟ್ಟಿದ್ದರಿಂದ ಗಣೇಶ್ ರಮ್ಯಾ ವಿರುದ್ಧ ಕೆರಳಿದ್ದರು. ವಿವಾದ ಎಷ್ಟರ ಮಟ್ಟಿಗೆ ಹೋಗಿತ್ತೆಂದರೆ ಮೇಲ್ನೋಟಕ್ಕೆ ಒಗ್ಗಟ್ಟಾಗಿದ್ದ ಕನ್ನಡ ಚಿತ್ರರಂಗ ಭಹಿರಂಗವಾಗಿ ವಿವಿಧ ಬಣಗಳಾಗಿ ರೂಪುಗೊಳ್ಳಳು ಆರಂಭಿಸಿತ್ತು.

ಈ ನಡುವೆ ಹಣಕಾಸು ವಿಚಾರಗಳು ತಳುಕುಹಾಕಿಕೊಂಡಿತ್ತು. ಕೊನೆಗೆ ನಟ ಅಂಬರೀಷ್ ವಿವಾದಗಳಿಗೆ ತೆರೆ ಎಳೆದು ಒಟ್ಟಾಗಿ ಇರಿ ಎಂದು ಬುದ್ದಿಹೇಳಿದ್ದರು.

ಮೂರನೇ ವಿವಾದ ಗನ್ ಹರೀಶ್ ರಾಜ್ ಅವರದು. ಸಾಕಷ್ಟು ಹಿರಿಯರೊಂದಿಗೆ ಪಳಗಿ ಚಿತ್ರ ನಿರ್ಮಾಣದಲ್ಲಿ ಅನುಭವ ಪಡೆದು ಚಿತ್ರ ನಿರ್ದೇಶಿಸಿದ್ದರು. ಮೈಮೇಲೆ ಸಾಕಷ್ಟು ಸಾಲ ಇದ್ದಿದ್ದರಿಂದ ಚಿತ್ರ ಪ್ರದರ್ಶನವಾಗಲೇ ಬೇಕು ಮತ್ತು ಥಿಯೇಟರ್ ಮಾಲೀಕರು ಪ್ರದರ್ಶಿಸಲೇ ಬೇಕು ಎಂಬ ಆತುರ, ಹಪಹಪಿ, ಹಣದ ಅತ್ಯಾವಶ್ಯಕತೆ ಆತ್ಮಹತ್ಯೆಗೆ ಯತ್ನಿಸಲು ದಾರಿ ಮಾಡಿಕೊಟ್ಟಿತ್ತು.

ನಾಲ್ಕನೆಯದಾಗಿ ಬಹುಮುಖ ಪ್ರತಿಭೆ ಹಿರಿಯೂರು ರಾಘವೇಂದ್ರ ಅವರು ತನ್ನ ಅಳಲನ್ನು ಮಾಧ್ಯಮಗಳ ಮುಂದೆ ತೋಡಿಕೊಳ್ಳಲು ಬಂದು ನೋವು ತಡೆಯಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದು. ಇದಕ್ಕೂ ಪ್ರಮುಖ ಕಾರಣ ಹಣಕಾಸು ವ್ಯವಹಾರ. ಆನಂತರ ಸುದ್ದಿ ಮಾಡಿದ್ದು ಕಿರುತೆರೆ ನಟಿಯರಾದ ಸುಮ ಮತ್ತು ಲಕ್ಷ್ಮಿಯ ವೇಶ್ಯಾವಾಟಿಕೆ ಜಾಲ.
SUJENDRA

ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರಮಟ್ಟದ ಗಮನ ಸೆಳೆದದ್ದು ನಟ ದರ್ಶನ್ ವಿವಾದ. ಸಂಸಾರ ಕಲಹ ಬೀದಿಗೆ ಬಂದು ರಂಪವಾಗಿತ್ತು. ಸಣ್ಣದಾಗಿ ಮುಗಿಯಬೇಕಿದ್ದ ವಿವಾದ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲೇರಿತ್ತು. ಸಾಲದಕ್ಕೆ ನಿರ್ಮಾಪಕರ ಸಂಘ ನಟಿ ನಿಖಿತಾ ವಿರುದ್ಧ ಪೌರುಷ ತೋರಿಸಿತ್ತು.

ನಾವೇನು ಕಡಿಮೆಯಿಲ್ಲ ಎಂಬಂತೆ ಪ್ರತಿಷ್ಟಿತ ಮಹಿಳಾ ಸಂಘಗಳು ಟಿವಿ ವಾಹಿನಿಗಳ ಮುಂದೆ ಬಂದು ಮಹಿಳಾ ರಕ್ಷಣೆಗಿರುವ ಐಪಿಸಿ ಸೆಕ್ಷನ್‌ಗಳ ಕುರಿತು ಮಾಹಿತಿ ನೀಡಿದ್ದರು.

ಇದರ ಬೆನ್ನಲ್ಲೇ ಒರಟ ಪ್ರಶಾಂತ್ ವಿವಾದ ಶುರುವಾಗಿತ್ತು. ಪತ್ನಿಯಿಂದ ಬೇರೆಯಾಗಿರುವ ನಟ ಅಕ್ರಮ ಸಂಬಂಧಗಳಲ್ಲೇ ನಿರತರಾಗಿದ್ದಾರೆ. ಹಾಗೂ ತನ್ನ ಚಿತ್ರಗಳಲ್ಲಿ ನಾಯಕಿಯ ಸ್ಥಾನ ಕೊಡುತ್ತೇನೆಂದು ಯುವತಿಯರನ್ನು ಪುಸಲಾಯಿಸಿ ಅವರನ್ನು ಬಲೆಗೆ ಬೀಳಿಸಿಕೊಂಡು ತನಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಪತ್ನಿ ಶಶಿಕಲಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಈ ವರ್ಷದ ಕೊನೆಯ ವಿವಾದವೆಂದರೆ, ಹುಡುಗ ಹುಡುಗಿ ಚಿತ್ರದ ಖ್ಯಾತಿಯ ಸೌಮ್ಯ ಅವರಿಗೆ ಆಕೆಯ ಪ್ರಿಯಕರ ಪೊಲೀಸ್ ಪೇದೆ ಚಾಕುವಿನಿಂದ ಚುಚ್ಚಿ ಸಾಯಿಸಲು ಯತ್ನಿಸಿದ್ದು. ನಟಿ ಸೌಮ್ಯ ಬೇರೆ ಹುಡುಗರೊಂದಿಗೆ ಸಲುಗೆಯಿಂದ ಇದ್ದಾರೆ ಎಂಬ ಕಾರಣಕ್ಕೆ ಪ್ರಿಯಕರ ಪೊಲೀಸ್ ಸಿಟ್ಟಿಗೆದ್ದು ಈ ಕೃತ್ಯಕ್ಕೆ ಮುಂದಾಗಿದ್ದ ಎನ್ನಲಾಗಿದೆ.

ಮತ್ತೊಮ್ಮೆ ಹೀಗಾಗದಿರಲಿ. ಕೇವಲ ನಟ ನಟಿಯರು ಮಾತ್ರವಲ್ಲ ಎಲ್ಲರೂ ಗೌರವದಿಂದ ಜೀವನ ನಡೆಸುವಂತೆ ಹೊಸ ವರ್ಷದ ಶುಭ ಹಾರೈಸಿ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ