ಏಕಕಾಲಕ್ಕೆ 3000 ಪ್ಲಸ್ ಮಂದಿ ಕಾಂತಾರ ವೀಕ್ಷಿಸಿ ದಾಖಲೆ

ಮಂಗಳವಾರ, 25 ಅಕ್ಟೋಬರ್ 2022 (16:27 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ಮಾಡುತ್ತಾ ಯಶಸ್ವೀ ಪ್ರದರ್ಶನ ಮಾಡುತ್ತಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಕೊಯಮತ್ತೂರಿನ ಇಶಾ ಫೌಂಡೇಷನ್ ಇಶಾ ಯೋಗ ಸೆಂಟರ್ ನಲ್ಲಿ ಕಾಂತಾರ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಿತ್ತು.

ಈ ಪ್ರದರ್ಶನವನ್ನು ಏಕಕಾಲಕ್ಕೆ 3000 ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಇದು ಹೊಸ ದಾಖಲೆಯಾಗಿದೆ. ಕನ್ನಡದ ಮಟ್ಟಿಗೆ ಏಕಕಾಲಕ್ಕೆ ಒಂದು ಸಿನಿಮಾವನ್ನು ಇಷ್ಟು ಮಂದಿ ವೀಕ್ಷಿಸಿರುವುದು ದಾಖಲೆಯಾಗಿದೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ