ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಈಗ ಸಂಕಷ್ಟಕ್ಕೀಡಾಗಿದೆ.
ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಕಾಂತಾರ ಸಿನಿಮಾದ ವರಾಹ ರೂಪಂ ಹಾಡು ಮಲಯಾಳಂನ ನವರಸಂ ಹಾಡಿನ ಟ್ಯೂನ್ ಕದ್ದಿದ್ದು ಎಂದು ಆರೋಪಿಸಲಾಗಿದೆ. ಇದಕ್ಕೆ ಈಗಾಗಲೇ ಸಂಗೀತ ನಿರ್ದೇಶಕ ಅಜನೀಶ್ ಕೂಡಾ ಸ್ಪಷ್ಟನೆ ನೀಡಿದ್ದಾರೆ.
ಹಾಗಿದ್ದರೂ ಈಗ ನವರಸಂ ಚಿತ್ರತಂಡ ಕಾಂತಾರ ತಂಡದ ಮೇಲೆ ಟ್ಯೂನ್ ಕದ್ದ ಆರೋಪದ ಮೇರೆಗೆ ಕೇಸ್ ದಾಖಲಿಸಲು ತೀರ್ಮಾನಿಸಿದೆ. ಇದಕ್ಕೆ ಕಾಂತಾರ ತಂಡ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಕಾದು ನೋಡಬೇಕಾಗಿದೆ.