ಬಾಹುಬಲಿಯ ತಮಿಳು ರೈಟ್ಸ್‌ಗಾಗಿ 36 ಕೋಟಿ ವೆಚ್ಚ...?!

ಶನಿವಾರ, 28 ಮಾರ್ಚ್ 2015 (10:34 IST)
ಹಾಲಿವುಡ್ ಮಟ್ಟದಲ್ಲಿ ಅದ್ಧೂರಿಯಿಂದ ತಯಾರಾಗಿದೆ ಎಸ್.ಎಸ್.ರಾಜಮೌಳಿ ಅವರ ನಿರ್ದೇಶನದ  ಚಿತ್ರ ಬಾಹುಬಲಿ. ಈ ಚಿತ್ರವು ಎರಡು ಪಾರ್ಟ್ ಆಗಿ ಜನರ ಮುಂದೆ ಬರಲಿದೆ. ಆದರೆ ಈ ಚಿತ್ರ ತನ್ನ ಕೆಲಸ ಆರಂಭ ಮಾಡಿಕೊಂಡ ಕ್ಷಣದಿಂದ ಸೆನ್ಸೇಷನಲ್ ಸುದ್ದಿಗಳ ಮೂಲಕ ಜನರ ಮುಂದೆ ಬಂದಿದೆ. ಈಗ ಬೇರೆ ಭಾಷೆಯಲ್ಲಿ ರೈಟ್ಸ್ ಪಡೆಯಲು ಅನೇಕ ಚಿತ್ರ ನಿರ್ಮಾಪಕರು ಬಂದಿದ್ದಾರೆ. ಹಿಂದಿ ಚಿತ್ರ ರಂಗದ ಮಂದಿ ಸಹ ಭಾರಿ ಮೊತ್ತ ನೀಡಿ ಹಾಕು ಪಡೆಯಲು ತಾ ಮುಂದೆ ನಾ ಮುಂದೆ ಎಂದು ಬರುತ್ತಿದ್ದಾರೆ. 
ಪ್ರಸ್ತುತ ತಮಿಳು ರೈಟ್ಸ್‌ನ್ನು ಟಾಲಿವುಡ್ ಪ್ರಸಿದ್ಧ ಪ್ರೊಡಕ್ಷನ್ ಹೌಸ್ ಆದಂತಹ ಯುವಿ ಕ್ರಿಯೇಷನ್ಸ್ ಅವರು ಅಧಿಕ ಪ್ರಮಾಣದ ಮೊತ್ತ ನೀಡಿ ಕೊಂಡಿದ್ದಾರಂತೆ, ಈ ಸಂಗತಿ ಬಗ್ಗೆ ಈಗಾಗಲೇ ಎಲ್ಲೆಡೆ ಹರಡಿರುವ ಸುದ್ದಿಯಾದರು, ಅವರು ಎಷ್ಟು ಮೊತ್ತ ನೀಡಿ ಆ ಸಿನಿಮಾ ಕೊಂಡಿದ್ದಾರೆ ಎನ್ನುವುದು ಈಗ  ನಿಮಗೆ ಹೇಳ ಬೇಕಾದ ಸಂಗತಿಯಾಗಿದೆ. ಹಲವು ತಮಿಳು, ತೆಲುಗು ಪ್ರೊಡಕ್ಷನ್ ಸಂಸ್ಥೆಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಯುವಿ ಕ್ರಿಯೇಶನ್ ಅವರು ಸುಮಾರು 36 ಕೋಟಿಗಳಷ್ಟು ಮೊತ್ತವನ್ನು ನೀಡಿ ತಮಿಳು ರೈಟ್ಸ್ ಕೊಂಡಿದ್ದಾರಂತೆ. 
 
ಒಂದು ಡಬ್ಬಿಂಗ್ ಚಿತ್ರಕ್ಕೆ ಈ ಪರಿಯ ಮೊತ್ತ ಯಾಕೆ ನೀಡಿದ್ದಾರೆ ಎನ್ನುವ ಆಶ್ಚರ್ಯ ತೆಲುಗು ಮಂದಿಯನ್ನು ಕಾಡಿದೆಯಂತೆ. ಆದರೆ ತೆಲುಗಿನ ರೆಬಲ್ ಸ್ಟಾರ್ ಪ್ರಬಾಸ್, ರಾಣ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನ ಹೀರೋಯಿನ್‌ಗಳಾಗಿ ಅಭಿನಯಿಸಿರುವ ಈ ಚಿತ್ರದ ಬಗ್ಗೆ ದುಡ್ಡು ಹೂಡಿದವರಿಗೆ  ಸಾಕಷ್ಟು ನಿರೀಕ್ಷೆಗಳಿವೆ. ಅವರ ಆ ನಿರೀಕ್ಷೆಗಳು ಸುಳ್ಳು ಮಾಡದಿರಲಿ ಸಿನಿ ಪ್ರೇಕ್ಷಕರು.  

ವೆಬ್ದುನಿಯಾವನ್ನು ಓದಿ