ಶಾರ್ಪ್ ಶೂಟರ್ ಮತ್ತು ಪ್ರಪಂಚ ಚಿತ್ರಗಳಲ್ಲಿನ ನಟನೆಯ ನಂತರ ಈಗ ಅತಿ ಹೆಚ್ಚು ಬ್ಯುಸಿಯಾಗಿರುವ ಚಿತ್ರ ಹಿಟ್ ವಿಕೆಟ್. ಈ ಚಿತ್ರದ ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆಯನ್ನು ಸಂದೀಪ್ ಗೌಡ ಅವರು ಹೊತ್ತಿದ್ದಾರೆ. ಈ ಮೊದಲು ಸಂದೀಪ್ ಗೌಡ ಅವರು ದಿಗಂತ್ ಅಭಿನಯದ ಬಿಸಿಲೆ ಚಿತ್ರವನ್ನು ನಿರ್ದೇಶನ ಮಾಡಿದ್ದರು.ರೈನ್ ಕೋಟ್ ಚಿತ್ರದಲ್ಲಿ ನಟಿಸಿದ್ದ ಅಪೂರ್ವ ರೈ ಈ ಚಿತ್ರದ ಮುಖ್ಯ ಪಾತ್ರಧಾರಿಯಾಗಿದ್ದಾಳೆ. ಅನಂತ್ ನಾಗ್ ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದ ಸಂಗೀತವನ್ನು ಮಿಥುನ್, ಗಗನ್, ವಿವೇಕ್, ಅಭಿಮಾನ್ ಮತ್ತು ಜುದ ಅವರು ನಿರ್ದೇಶನ ಮಾಡುತ್ತಿದ್ದಾರೆ.